ಬೆಂಗಳೂರು : ಮಕರ ಸಂಕ್ರಾಂತಿ ವರ್ಷದ ಮೊದಲ ಹಾಗೂ ಸುಗ್ಗಿಯ ಹಬ್ಬ. ಈ ದಿನ ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಲ್ಲಿ ವಿಸ್ಮಯವೊಂದು ನಡೆಯಲಿದೆ. ಇಂದು ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳಲಿದೆ. ಇದನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಗವಿಗಂಗಾಧರೇಶ್ವರ ದೇಗುಲದಲ್ಲಿ ನೆರೆದಿದೆ.
ಈ ವರ್ಷ ಉತ್ತರಾಯಣ ಆರಂಭಕ್ಕೆ ಇನ್ನೇನು ಕೆಲವೇ ಸಮಯ ಬಾಕಿ ಇದೆ. ದಕ್ಷಿಣಾಭಿಮುಖದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಸಂಚಲಿಸುತ್ತಾನೆ. ಹೀಗಾಗಿ ದಕ್ಷಿಣದ ಕಾಶಿಯಂತಲೇ ಖ್ಯಾತಿ ಪಡೆದಿರೋ ಬೆಂಗಳೂರಿನ ಗವಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಇಂದು ವಿಸ್ಮಯವೇ ನಡೆಯಲಿದೆ. ಶಿವನ ಪಾದವನ್ನ ಸೂರ್ಯರಶ್ಮಿ ಸ್ಪರ್ಶಿಸುವ ಮೂಲಕ ಪಥ ಬದಲಿಸಲಿದ್ದಾನೆ.
ಶಿವನ ಪಾದವನ್ನ ಇಂದು ಸಂಜೆ 5.20ರಿಂದ 5.23ರ ನಡುವಿನ ಸಮಯದಲ್ಲಿ 3 ನಿಮಿಷಗಳ ಕಾಲ ಸೂರ್ಯರಶ್ಮಿ ಸ್ಪರ್ಶ ವಾಗಲಿದೆ. ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆ-ಬಗೆಯ ಅಭಿಷೇಕಗಳು ನಡೆಯಲಿದೆ.
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸುತ್ತಿದ್ದಂತೆ ಗವಿಗಂಗಾಧರೇಶ್ವರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಇರುವ ಕಾರಣ, ಈ ವಿಸ್ಮಯ ಕಣ್ತುಂಬಿಸಿಕೊಳ್ಳಲು ದೇವಸ್ಥಾನದ ಹೊರ ಭಾಗದಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : ಮಕರ ಜ್ಯೋತಿ ಪ್ರಜ್ವಲಿಸುವ ದಿನವೇ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ..!