ಬೆಂಗಳೂರು : ಖೋ-ಖೋ ಫೀಲ್ಡ್ನಲ್ಲೇ ಪುಡಿರೌಡಿಗಳು ಡ್ರ್ಯಾಗರ್ ಹಿಡಿದು ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನ ಕೊತ್ತನೂರು ಸ್ಕೂಲ್ ಬಳಿ ನಡೆದಿದೆ. ಪುಂಡರ ಗ್ಯಾಂಗ್ ಡ್ರ್ಯಾಗರ್, ವಿಕೆಟ್ ಕೈಯಲ್ಲಿಡಿದು ಬೆದರಿಸಿದೆ.
ಬುದ್ದಿವಾದ ಹೇಳಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಟೂರ್ನಮೆಂಟ್ಗೆ ಬಂದಿದ್ದ ಬೇರೆ ಊರಿನ ಯುವಕರು ಶಾಲಾ ಮಕ್ಕಳ ಮುಂದೆಯೇ ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸಿದ್ದಾರೆ. ಈ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಖೋ-ಖೋ ಆಟದ ವೇಳೆ ಪುಂಡರು ಗಲಾಟೆ ಮಾಡ್ತಿದ್ದರು. ಹಾಗಾಗಿ ಸುಮ್ಮನಿರುವಂತೆ ಸೂಚಿಸಿದ್ದ ಅಂಪೈರ್ ಸುಲೇಮಾನ್ ಎಂಬುವವರಿಗೆ ಪುಂಡರ ಗ್ಯಾಂಗ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದೆ.
ಹಲ್ಲೆ ಮಾಡಿ ಮೊಬೈಲ್ ಒಡೆದು ಹಾಕಿ ಪುಂಡರು ದಾಂಧಲೆ ನಡೆಸಿರೋದು ನಿನ್ನೆ ಸಂಜೆ 4.30ರ ಸುಮಾರಿಗೆ ಸಂಭವಿಸಿದೆ. ನಾಲ್ವರು ಪುಂಡರ ಗ್ಯಾಂಗ್ ಝೆನ್ ಕಾರ್ನಲ್ಲಿ ಬಂದಿದ್ದರು. ಸುದೀಪ್, ಪವನ್ ಮತ್ತು ಗ್ಯಾಂಗ್ನಿಂದ ಹಲ್ಲೆ ನಡೆದಿದ್ದು, ಸುಲೆಮಾನ್ ದೂರು ಆಧರಿಸಿ ಕೊತ್ತನೂರು ಠಾಣೆಯಲ್ಲಿ FIR ದಾಖಲಾಗಿದೆ.
ಇದನ್ನೂ ಓದಿ : GT ಮಾಲ್ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ? ಫ್ಯಾಕ್ಟ್ಚೆಕ್ನಲ್ಲಿ ಬಯಲಾಯ್ತು ಪಂಚೆ ರಹಸ್ಯ..!