Download Our App

Follow us

Home » ರಾಜ್ಯ » FSL ರಿಪೋರ್ಟ್ ಬಂದ ಕೂಡಲೇ ಚಾರ್ಜ್​ ಶೀಟ್ ಸಲ್ಲಿಕೆ ಮಾಡುತ್ತೇವೆ – ​ಬಿ.ದಯಾನಂದ್ ಮಾಹಿತಿ..!

FSL ರಿಪೋರ್ಟ್ ಬಂದ ಕೂಡಲೇ ಚಾರ್ಜ್​ ಶೀಟ್ ಸಲ್ಲಿಕೆ ಮಾಡುತ್ತೇವೆ – ​ಬಿ.ದಯಾನಂದ್ ಮಾಹಿತಿ..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್​ ಬಿ.ದಯಾನಂದ್ ತಿಳಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಅವರು, ಹೈದ್ರಾಬಾದ್​ನಲ್ಲಿ ಟೆಕ್ನಿಕಲ್​​​​ ಸಲಕರಣೆ ಪರೀಕ್ಷೆ ಆಗಿದೆ. CFSL ರಿಪೋರ್ಟ್ ಪಡೆಯಲು ಖುದ್ದು ನಮ್ಮ ಟೀಂ ಹೋಗಿದೆ. ತನಿಖಾ ತಂಡ ಬರಲು CFSL ಲ್ಯಾಬ್​ ಅಧಿಕಾರಿಗಳು ಸೂಚಿಸಿದ್ದರು. ರಿಪೋರ್ಟ್ ಬಂದ ಕೂಡಲೇ ಚಾರ್ಜ್​ ಶೀಟ್ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಇಂದು ಅಥವಾ ನಾಳೆಯೇ ಎರಡು FSL ರಿಪೋರ್ಟ್ ಕೈಸೇರಲಿವೆ. ಅಂತಿಮ ರೀಪೋರ್ಟ್​ಗಳನ್ನು ಪರಿಶೀಲಿಸಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗುತ್ತಿದೆ. ಮುಂದಿನ ತಿಂಗಳ ಆರಂಭದಲ್ಲೇ ಸರ್ಕಾರಿ ರಜೆಗಳಿವೆ. ಹೀಗಾಗಿ ಈ ತಿಂಗಳ ಅಂತ್ಯದಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಸಾಧ್ಯತೆಯಿದೆ ಎಂದು ಪೊಲೀಸ್ ಕಮಿಷನರ್​ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ‘ಜಿಂಗೋ’ ಆಗಿ ಡಾಲಿ ಧನಂಜಯ್ ಎಂಟ್ರಿ.. ಇದು ಡೇರ್ ಡೆವಿಲ್ ಮುಸ್ತಾಫಾ ನಿರ್ದೇಶಕರ ಹೊಸ ಪ್ರಯತ್ನ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here