Download Our App

Follow us

Home » ಅಪರಾಧ » ಚಿತ್ರದುರ್ಗದಲ್ಲಿ ಹಣ ಡಬಲ್ ಮಾಡುವ ಆಸೆ ತೋರಿಸಿ 4.79 ಕೋಟಿ ವಂಚಿಸಿದ ವಂಚಕ..!

ಚಿತ್ರದುರ್ಗದಲ್ಲಿ ಹಣ ಡಬಲ್ ಮಾಡುವ ಆಸೆ ತೋರಿಸಿ 4.79 ಕೋಟಿ ವಂಚಿಸಿದ ವಂಚಕ..!

ಚಿತ್ರದುರ್ಗ : ಹಣ ಡಬಲ್ ಮಾಡುವ ಆಸೆ ತೋರಿಸಿ ಭಾರೀ ವಂಚನೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಆಂಧ್ರದ ಕರ್ನೂಲು ಮೂಲದ ಕೋಡೆ ರಮಣಯ್ಯ ಎಂಬಾತ ಬರೋಬ್ಬರಿ 4 ಕೋಟಿ 79 ಲಕ್ಷ ವಂಚಿಸಿ ವಿದೇಶಕ್ಕೆ ಹಾರಿದ್ದಾನೆ.

ಚಿಕ್ಕಜಾಜೂರು ಗ್ರಾಮದ ರೈಲ್ವೆ ಜಂಕ್ಷನ್​ನಲ್ಲಿ ಕೆಲಸ ಮಾಡ್ತಿದ್ದ 106 ಜನ ರೈಲ್ವೆ ನೌಕರರು ಹಣದ ಆಸೆಗೆ ಬಲಿಯಾಗಿ ಕಂಗಾಲಾಗಿದ್ದಾರೆ. ಕ್ರೌಡ್ ಕ್ಲಬ್ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹೆಸರಲ್ಲಿ ಮೋಸ ಮಾಡಿದ್ದು, 60 ದಿನದಲ್ಲಿ ಹಣ ಡಬಲ್​ ಮಾಡೋದಾಗಿ ನಂಬಿಸಿ ಲಕ್ಷ ಲಕ್ಷ ಪಡೆದು ವಂಚನೆ ಮಾಡಿದ್ದಾನೆ.

ಕರ್ನಾಟಕ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ವಂಚಿಸಿರುವ ಆರೋಪ ಕೇಳಿಬಂದಿದೆ. 106 ಮಂದಿ ರೈಲ್ವೆ ನೌಕರರು ಹಣ ವಾಪಾಸ್ ಪಡೆಯಲಾಗದೆ ಕಂಗಾಲಾಗಿದ್ದು, ಈ ಬಗ್ಗೆ ರೈಲ್ವೆ ಹೊರ ಗುತ್ತಿಗೆ ನೌಕರ ರಮೇಶಪ್ಪ ಎಂಬಾತನಿಂದ ದೂರು ದಾಖಲಾಗಿದೆ.

ವಂಚಕ ಕೋಡೆ ರಮಣಯ್ಯನ ವಿರುದ್ಧ ಕಳೆದ ಡಿಸೆಂಬರ್ 15 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, IPC 420, 406, 403 ಹಾಗೂ BUDS ಕಾಯ್ದೆ ಅಡಿ ಕೇಸ್ ದಾಖಲಾಗಿದೆ. ಈ ಪ್ರಕರಣ ಚಿತ್ರದುರ್ಗದ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆಯಾಗಿದೆ.

ಇದನ್ನೂ ಓದಿ : ರಾಮನಗರ : ಚುಚ್ಚುಮದ್ದು ನೀಡಿದ 1 ಗಂಟೆಯಲ್ಲಿ ಮಗು ಸಾ*ವು – ವೈದ್ಯರ ನಿರ್ಲಕ್ಷ್ಯ ಆರೋಪ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here