Download Our App

Follow us

Home » ರಾಜ್ಯ » ಬೋನ್​ಗೆ ಸಿಲುಕಿದ ಹುಲಿ ಗಾಯಗೊಂಡಿದ್ರೂ ಚಿಕಿತ್ಸೆ ಕೊಡಿಸದೆ ಕೇರಳಕ್ಕೆ ಓಡಿಸಿದ ಕರ್ನಾಟಕದ ಅರಣ್ಯ ಇಲಾಖೆ..!

ಬೋನ್​ಗೆ ಸಿಲುಕಿದ ಹುಲಿ ಗಾಯಗೊಂಡಿದ್ರೂ ಚಿಕಿತ್ಸೆ ಕೊಡಿಸದೆ ಕೇರಳಕ್ಕೆ ಓಡಿಸಿದ ಕರ್ನಾಟಕದ ಅರಣ್ಯ ಇಲಾಖೆ..!

ಮೈಸೂರು : ರ್ನಾಟಕದ ಅರಣ್ಯಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಗಾಯಾಳು ಹುಲಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ನೀಡದೆ ಕೇರಳ ಅರಣ್ಯ ವ್ಯಾಪ್ತಿಗೆ ಓಡಿಸಿದ ಆರೋಪ ಕೇಳಿ ಬಂದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಎಚ್‌ಡಿ ಕೋಟೆ ತಾಲೂಕಿನ ಗಂಡೆತ್ತೂರು ಗ್ರಾಮದಲ್ಲಿ ನಡೆದಿರುವ ಈ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಗಂಡೆತ್ತೂರು ಗ್ರಾಮದ ಗೋಪಾಲಗೌಡ ಎಂಬುವವರ ಮೇಲೆ ಹುಲಿ ದಾಳಿ ನಡೆಸಿತ್ತು. ನಂತರ ಅರಣ್ಯ ಇಲಾಖೆ ಗ್ರಾಮಸ್ಥರ ಆಕ್ರೋಶಕ್ಕೆ ಮಣಿದು ಬೋನ್​​ ಇಟ್ಟಿತ್ತು. ಹುಲಿ ಕಾಣಿಸಿಕೊಂಡಾಗ ಸ್ಥಳೀಯರು ಹುಲಿಯ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಹುಲಿಗೆ ಗಂಭೀರ ಗಾಯಗಳಾಗಿತ್ತು.

ಬಳಿಕ ಗಂಡೆತ್ತೂರು ಗ್ರಾಮದ ಕಾಳೇಗೌಡ ಎಂಬುವವರ ಜಮೀನಿನಲ್ಲಿ ಹುಲಿ ಬೋನಿಗೆ ಸೆರೆ ಸಿಕ್ಕಿತ್ತು. ಆದರೆ ಅರಣ್ಯ ಅಧಿಕಾರಿಗಳು ಗಾಯಗೊಂಡ ಹುಲಿಯನ್ನು ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ. ಹುಲಿಗೆ ಯಾವುದೇ ಟ್ರೀಟ್​ಮೆಂಟ್​ ಕೊಡಿಸದೇ ಕೇರಳ ಗಡಿಗೆ ಬಿಟ್ಟಿದ್ದಾರೆ ಎಂದು ಕರ್ನಾಟಕದ ಅರಣ್ಯಾಧಿಕಾರಿಗಳ ವಿರುದ್ಧ ಆರೋಪ ಕೇಳಿ ಬಂದಿದೆ.

ಅರಣ್ಯ ಅಧಿಕಾರಿಗಳು ಅದಕ್ಕೆ ಯಾವುದೇ ಚಿಕಿತ್ಸೆ ನೀಡಿಲ್ಲ ಅಥವಾ ಎನ್‌ಟಿಸಿಎ ವಿವರಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಅನುಸರಿಸಿಲ್ಲ. ವಯಸ್ಸಾದ ಹುಲಿಯ ಕುತ್ತಿಗೆ ಮತ್ತು ಕಾಲಿನ ಮೇಲೆ ಗಾಯಗಳಿದ್ದವು. ಹುಲಿಯನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡುವ ಬದಲು, ಅರಣ್ಯ ಅಧಿಕಾರಿಗಳು ಎನ್‌ಟಿಸಿಎ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೇರಳ ಅರಣ್ಯ ವ್ಯಾಪ್ತಿಗೆ ಓಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಾಂದರ್ಭಿಕ ಚಿತ್ರ

ಹಿರಿಯ ಅಧಿಕಾರಿಗಳ ಸೂಚನೆಯಂತೆ ರೇಂಜ್ ಫಾರೆಸ್ಟ್ ಆಫೀಸರ್ ಅಮೃತೇಶ್ ಅವರು ಗಾಯಗೊಂಡ ಹುಲಿಯನ್ನು ಸೆರೆಹಿಡಿಯಲು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಹುಲಿಯನ್ನು ಕೇರಳದ ಅರಣ್ಯ ಪ್ರದೇಶಕ್ಕೆ ಓಡಿಸಲು ತನ್ನ ಉನ್ನತ ಅಧಿಕಾರಿಗಳಿಂದ ಸೂಚನೆ ಬಂದಿದೆ ಎಂದು ವನ್ಯಜೀವಿ ಪರ ಹೋರಾಟಗಾರ ಶಿವಲಿಂಗು ಜತೆ  RFO ಅಮೃತೇಶ್ ಮಾತ್ನಾಡಿರೋ ಆಡಿಯೋ ಕೂಡ ವೈರಲ್ ಆಗಿದೆ.

ಈಗ ಕೇರಳದ ವಯನಾಡು ಜಿಲ್ಲೆ ಸುಲ್ತಾನ್ ಬತೇರಿ ಸಮೀಪ ಹುಲಿ ಪತ್ತೆಯಾಗಿದ್ದು, ಹುಲಿ ಕೇರಳ ಕಾಡಿನಲ್ಲಿ ಬಾಲಕನೊಬ್ಬನ ತಿಂದು ಹಾಕಿದೆ ಎನ್ನಲಾಗಿದೆ. ಕೇರಳ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ವೇಳೆ ಹುಲಿ ಪತ್ತೆಯಾಗಿದ್ದು, ಕೇರಳ‌ ಸರ್ಕಾರ ಮಾಹಿತಿ ಕೊಟ್ಟರೂ ಹುಲಿಯನ್ನು ಇನ್ನೂ ಹಸ್ತಾಂತರಿಸಿಕೊಂಡಿಲ್ಲ. ಬಂಡೀಪುರ, ನಾಗರಹೊಳೆ ನ್ಯಾಷನಲ್​ ಪಾರ್ಕ್​​ನಲ್ಲಿ ಈ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ,
ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಹುಲಿಗಳು ಸಾವಿಗೀಡಾಗ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ ಮಹಿಳೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here