Download Our App

Follow us

Home » ಜಿಲ್ಲೆ » ಕೋಲಾರ : ಶ್ರೀಗಂಧ ಮರ ಕಳ್ಳತನ ಮಾಡ್ತಿದ್ದ ಖದೀಮರ ಮೇಲೆ ಫೈರಿಂಗ್..!

ಕೋಲಾರ : ಶ್ರೀಗಂಧ ಮರ ಕಳ್ಳತನ ಮಾಡ್ತಿದ್ದ ಖದೀಮರ ಮೇಲೆ ಫೈರಿಂಗ್..!

ಕೋಲಾರ : ಶ್ರೀಗಂಧದ ಮರ ಕಳ್ಳತನ ಮಾಡ್ತಿದ್ದವನ ಕಾಲಿಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಜಿಲ್ಲೆಯ ಕಾಶಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಶ್ರೀಗಂಧ ಕಳ್ಳತನಕ್ಕೆ ಯತ್ನಿಸುತ್ತಿದ್ದ ತಾಯಲೂರು ಗ್ರಾಮದ ಭತ್ಯಪ್ಪ ಎಂಬುವನ ಕಾಲಿಗೆ ಗುಂಡು ತಾಗಿದ್ದು, ಮತ್ತೊಬ್ಬ ಆರೋಪಿ ಎಸ್ಕೇಪ್​ ಆಗಿದ್ದಾನೆ.

ಭತ್ಯಪ್ಪ ಆಂಧ್ರ ಪ್ರದೇಶದ ಐವರೊಂದಿಗೆ ಶ್ರೀಗಂಧ ಕಳ್ಳತನಕ್ಕೆ ಬಂದಿದ್ದನು. ಶ್ರೀಗಂಧ ಮರ ಕಳ್ಳತನ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಗಾರ್ಡ್ ಅನಿಲ್ ಬಂದಿದ್ದಾರೆ. ಬಳಿಕ, ಶ್ರೀಗಂಧ ಕಳ್ಳತನವನ್ನು ತಡೆಯಲು ಮುಂದಾಗಿದ್ದು, ಶರಣಾಗುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ.

ಆರೋಪಿಗಳು ಗಾರ್ಡ್​​​​ ಅನಿಲ್ ಅವರ​​​ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಾರ್ಡ್​​ ಅನಿಲ್​ ಭತ್ಯಪ್ಪ ಹಾಗೂ ಈತನ ಸಹಚರನ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ಭತ್ಯಪ್ಪನ ಸಹಚರ ಎಸ್ಕೇಪ್ ಆಗಿದ್ದಾನೆ. ಗುಂಡೇಟಿನಿಂದ ನರಳಾಡುತ್ತಿದ್ದ ಭತ್ಯಪ್ಪನನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ : MUDA ಹಗರಣದ ಎಲ್ಲಾ ದಾಖಲೆ ನನ್ನ ಬಳಿಯಿದೆ, ಬಹಿರಂಗ ಪಡಿಸ್ತೇನೆ : ಶಾಸಕ ಶ್ರೀವತ್ಸ ಸ್ಫೋಟಕ ಹೇಳಿಕೆ..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here