ತುಮಕೂರು : ಪಟಾಕಿ ಮಳಿಗೆ, ಪ್ಲಾಸ್ಟಿಕ್ ಅಂಗಡಿ, ಗ್ರಂಥಿಗೆ ಅಂಗಡಿಯ ಗೋದಾಮು ಹೊತ್ತಿ ಉರಿದಿರುವ ಘಟನೆ ನಗರದ ಹೃದಯ ಭಾಗ ಮಂಡಿ ಪೇಟೆಯಲ್ಲಿ ನಡೆದಿದೆ. ರಾಮಕೃಷ್ಣ ಎಂಬುವರಿಗೆ ಸೇರಿದ ಅಂಗಡಿ ಮಳಿಗೆಯಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಹೊತ್ತಿಕೊಂಡ ಬೆಂಕಿ ಸುಮಾರು ಹೊತ್ತು ಉರಿದಿದೆ.
ಮಂಡಿ ಪೇಟೆಯ ಮೆಟ್ರೋ ಮುಂಭಾಗ ಇರುವ ನೇತಾಜಿ ಟ್ರೇಡರ್ಸ್ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ನಿರಂತರವಾಗಿ ಪಟಾಕಿ ಸ್ಫೋಟಗೊಂಡು ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದರಿಂದ ಜನರು ಕಂಗಾಲಾಗಿದ್ದರು.
ಕೂಡ್ಲೇ ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು, ಮಂಡಿಪೇಟೆ ರಸ್ತೆಯನ್ನು ಎರಡು ಕಡೆ ಬಂದ್ ಮಾಡಲಾಗಿತ್ತು. ತುಮಕೂರು ನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ : ನನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಡಲ್ಲ - ನಿರಾಣಿಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು..!
Post Views: 68