ಬೆಂಗಳೂರು : ಬಾಗಲಕೋಟೆಯಲ್ಲಿ ನಿನ್ನೆ ಸಚಿವ ಎಂ.ಬಿ. ಪಾಟೀಲ್ನ್ನು ದನ ಕಾಯೋನು ಎಂದಿದ್ದ ಮುರುಗೇಶ್ ನಿರಾಣಿ ವಿರುದ್ಧ ಇದೀಗ MBP ಕೆಂಡ ಕಾರಿದ್ದಾರೆ. ನನ್ನ ತಂಟೆಗೆ ಬಂದವರನ್ನು ಸುಮ್ಮನೆ ಬಿಡಲ್ಲ, ಹಿಂದೆಯೂ ಬಿಟ್ಟಿಲ್ಲ ಮುಂದೆಯೂ ಬಿಡೋನಲ್ಲ. ಬಾಗಲಕೋಟೆಗೇ ಬಂದು ತಕ್ಕ ಉತ್ತರ ಕೊಡ್ತೀನಿ ಎಂದಿದ್ದಾರೆ.
ಟ್ವೀಟ್-Xನಲ್ಲಿ ಮುರುಗೇಶ್ ನಿರಾಣಿಗೆ ಎಂ.ಬಿ.ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ. ಮಿಸ್ಟರ್ ಪಾಟೀಲ ಗಾಜಿನ ಮನೇಲಿ ಕುಳಿತು ಕಲ್ಲು ಒಡೀಬೇಡ, KIADB ಡಮ್ಮಿ ಹೆಸರಿನಲ್ಲಿ ಭೂಮಿ ಖರೀದಿಸಿದ್ದೀಯಾ..? ನಿನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಿನ್ನ ಯೋಗ್ಯತೆ ನೋಡಿಕೋ. BLDE ಸಂಸ್ಥೆಯ ಹುತ್ತದಲ್ಲಿ ಹಾವಾಗಿ ಸೇರಿಕೊಂಡಿದ್ದೀಯಾ, ತಾಕತ್ತಿದ್ದರೆ ಆ ಸಂಸ್ಥೆಯಿಂದ ಹೊರಬಂದು ಒಂದು ಸಂಸ್ಥೆ ಕಟ್ಟು. ನೀರಾವರಿ ಸಚಿವರಾಗಿ ನಿಮ್ಮ ಬೇರೆಯವರ ಹೆಸರಲ್ಲಿ ನೀಡಿದ್ದಿ, ಕಡಿಮೆ ಬೆಲೆಗೆ ಜಾಗ ಪಡೆದು ತಮಿಳುನಾಡು ಕಂಪನಿಗೆ ಮಾರಿದ್ದಿ ಎಂದು ಗುಡುಗಿದ್ದಾರೆ.
ಮಿಸ್ಟರ್ ನಿರಾಣಿ ನನ್ನ ಬಗ್ಗೆ ಏಕವಚನದಲ್ಲಿ ಮಾತ್ನಾಡಿದ್ದಿ, ಬಾಗಲಕೋಟೆಗೇ ಬಂದು ನಿನ್ನ ಬಂಡವಾಳ ಬಯಲು ಮಾಡ್ತೀನಿ. ನಾನೇನು ಅಂತಾ ಹಿಂದೆಯೇ ನಿನಗೆ ತೋರಿಸಿದ್ದೇನೆ, ಧನ ಕಾಯುವವನು ಅನ್ನೋ ಪದ ಎಲ್ಲೂ ಬಳಸಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನಾಗಿದೆ ನನಗೂ ಗೊತ್ತಿದೆ, ನಿನ್ನ ಶಿಕ್ಷಣ ಸಂಸ್ಥೆ, ಸಕ್ಕರೆ ಕಾರ್ಖಾನೆಗೆ ಏನ್ ಲಾಭ ಪಡೆದಿದ್ದೀರಿ ಗೊತ್ತು ಎಂದು ಟ್ವೀಟ್-ಎಕ್ಸ್ನಲ್ಲಿ ನಿರಾಣಿ ವಿರುದ್ಧ MBP ಸಾಲು-ಸಾಲು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಕ್ರಿಶ್ಚಿಯನ್ ಸಂಪ್ರದಾಯದಂತೆ ಮಂಗಳೂರಿನಲ್ಲಿ ತರುಣ್-ಸೋನಲ್ ಚರ್ಚ್ ವೆಡ್ಡಿಂಗ್ – ಫೋಟೋಸ್ ಇಲ್ಲಿವೆ ನೋಡಿ..!