ಕಲಬುರಗಿ : ಪೆಟ್ರೋಲ್ ಪಂಪ್‌ಗೆ NOC ನೀಡಲು 20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ, ಒಬ್ಬ ಸಿಬ್ಬಂದಿ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ರಾಜ್ಯ ಅಗ್ನಿಶಾಮಕ ತುರ್ತು ಸೇವೆಗಳ ಜಿಲ್ಲಾ ಅಧಿಕಾರಿ ಗುರುರಾಜ ಮತ್ತು ಸಿಬ್ಬಂದಿ ಸೋಫನ್ ರಾವ್ ಅವರು ವ್ಯಕ್ತಿಯೊಬ್ಬರಿಂದ 20 ಸಾವಿರ ರೂ. ಲಂಚ ಪಡೆಯುವಾಗ ಲೋಕಾ DySP ಮಂಜುನಾಥ್ ಹಾಗೂ ಲೋಕಾ SP ಜಾನ್ ಆಂಟನಿ ನೇತೃತ್ವದ ತಂಡ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದೆ.
ಪೆಟ್ರೋಲ್ ಪಂಪ್‌ಗೆ ಎನ್‌ಒಸಿ ನೀಡಲು 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ಚಿತ್ತಾಪುರ ರಾಜರಾಮಪ್ಪ ನಾಯಕ ದೂರಿನಲ್ಲಿ ತಿಳಿಸಿದ್ದರು. ನಂತರ 20 ಸಾವಿರ ರೂ. ಪಡೆಯುವಾಗ ಕಚೇರಿಯಲ್ಲಿ ದಾಳಿ ಮಾಡಲಾಗಿದೆ. ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು – ಎಲ್ಲೆಲ್ಲಿ ಏನೇನಾಯ್ತು?
Post Views: 166