Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ FIR ದಾಖಲು..!

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ FIR ದಾಖಲು..!

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ HAL ಪೊಲೀಸ್​ ಠಾಣೆಯಲ್ಲಿ FIR ದಾಖಲಾಗಿದೆ. IPC-1880(1208, 324, 307), UAPAಯ 16,18, 3 ರಡಿ ಕೇಸ್​ ದಾಖಲಾಗಿದೆ.

explosive substance’s act, 1967(15 ಮತ್ತು 16 ಸೆಕ್ಷನ್) ಅಡಿ FIR ದಾಖಲಾಗಿದ್ದು, ನಿನ್ನೆ ಮಧ್ಯಾಹ್ನ‌ ರಾಮೇಶ್ವರ ಕೆಫೆಯಲ್ಲಿ ಸ್ಪೋಟ ನಡೆದಿತ್ತು. ಈ ಘಟನೆಯಲ್ಲಿ 9 ಮಂದಿಗೆ ಗಾಯಗಳಾಗಿದ್ದವು. ಮೈಸೂರು ಮೂಲದ ಸ್ವರ್ಣಾಂಬ ಎಂಬುವರಿಗೆ ತೀವ್ರ ಗಾಯಗಳಾಗಿದೆ. ರಾಮೇಶ್ವರ ಕೆಫೆ ಸೂಪರ್​​​ವೈಸರ್​​ ರಾಜೇಶ್ ಈ ಪ್ರಕರಣ ಸಂಬಂಧ ದೂರು ನೀಡಿದ್ದರು. ಸೂಪರ್ ವೈಸರ್ ನೀಡಿದ ದೂರಿನ ಮೇರೆಗೆ ಇದೀಗ FIR ದಾಖಲಾಗಿದೆ.

ಪೊಲೀಸರು ಅಪರಿಚಿತ ಎಂದು ದೂರು ದಾಖಲಿಸಿಕೊಂಡಿದ್ದು, ಮಧ್ಯಾಹ್ನ 12.50ರಿಂದ ಮಧ್ಯಾಹ್ನ 1 ಗಂಟೆ ಮಧ್ಯೆ ಬ್ಲಾಸ್ಟ್​ ಎಂದು ನಮೂದು ಮಾಡಿದ್ದಾರೆ. ಇದೀಗ ಬಾಂಬ್​​ ಬ್ಲಾಸ್ಟ್​ ಆದ ಸ್ಥಳದಲ್ಲಿ ತನಿಖಾಧಿಕಾರಿಗಳ ಟೀಂ ಇದ್ದು, ವೈಟ್​ಫೀಲ್ಡ್​ ವಿಭಾಗದ ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ​​​ ಮಾಡಲಾಗಿದೆ.

ವೈಟ್​ ಫೀಲ್ಡ್​ ಡಿಸಿಪಿ ಡಾ.ಶಿವಕುಮಾರ್​​​​, ವೈಟ್​ ಫೀಲ್ಡ್ ACP ರೀನಾ ಸುವರ್ಣ, ಎಸಿಪಿ ಪ್ರಿಯದರ್ಶಿನಿ ಹಾಗೂ ಸ್ಥಳೀಯ ಪೊಲೀಸರು ತನಿಖಾ ತಂಡಗಳಿಗೆ ಸಹಕಾರ ನೀಡುತ್ತಿದ್ದಾರೆ. ಹಾಗೆಯೇ ಬಾಂಬ್​ ನಿಷ್ಕ್ರಿಯ ಟೀಂ ಹಾಗೂ NSG ಕಮಾಂಡೋ ಟೀಂ ಕೂಡ ಸ್ಥಳದಲ್ಲೇ ಇದೆ.

ಇದನ್ನೂ ಓದಿ : ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ : ಕೋರ್ಟ್ ಸೂಚನೆಯಂತೆ ಮಠಕ್ಕೆ ಆಡಳಿತ ಸಮಿತಿ ಅಧ್ಯಕ್ಷರನ್ನ ನೇಮಿಸಿದ ಸರ್ಕಾರ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here