Download Our App

Follow us

Home » ರಾಜಕೀಯ » ಸಿಎಂ ಸಿದ್ದರಾಮಯ್ಯನವರೇ ಸಚಿವ ನಾಗೇಂದ್ರ ಮೇಲೆ FIR ಯಾಕೆ ಹಾಕಿಲ್ಲ- ವಿಪಕ್ಷ ನಾಯಕ ಆರ್​.ಅಶೋಕ್​ ಪ್ರಶ್ನೆ..!

ಸಿಎಂ ಸಿದ್ದರಾಮಯ್ಯನವರೇ ಸಚಿವ ನಾಗೇಂದ್ರ ಮೇಲೆ FIR ಯಾಕೆ ಹಾಕಿಲ್ಲ- ವಿಪಕ್ಷ ನಾಯಕ ಆರ್​.ಅಶೋಕ್​ ಪ್ರಶ್ನೆ..!

ಬೆಂಗಳೂರು : ಸಿಎಂ ಸಿದ್ದರಾಮಯ್ಯನವರೇ ಮಂತ್ರಿ ನಾಗೇಂದ್ರ ಮೇಲೆ FIR ಯಾಕೆ ಹಾಕಿಲ್ಲ. ಅಧಿಕಾರಿ ಚಂದ್ರಶೇಖರನ್​​ ಡೆತ್​ನೋಟ್​ನಲ್ಲಿ ಸಚಿವರ ಉಲ್ಲೇಖ ಆಗಿದೆ. ಸಚಿವ ನಾಗೇಂದ್ರ ಮೇಲೆ ಕೊಲೆ ಕೇಸ್​ ಹಾಕಿ ಅರೆಸ್ಟ್ ಮಾಡಿ. FIR ದಾಖಲು ಮಾಡಿರುವ ಅಧಿಕಾರಿಗಳನ್ನು ಯಾಕಿನ್ನೂ ಅರೆಸ್ಟ್ ಮಾಡಿಲ್ಲ ಎಂದು ಸಿದ್ದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​ ಸರಣಿ ಪ್ರಶ್ನೆ ಹಾಕಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಸಂಬಂಧ ಸಚಿವ ನಾಗೇಂದ್ರ ರಾಜೀನಾಮೆಗೆ ಬೆಂಗಳೂರಿನಲ್ಲಿ ಆಗ್ರಹಿಸಿರುವ ಆರ್​.ಅಶೋಕ್ ಅವರು, ಈಶ್ವರಪ್ಪ ರಾಜೀನಾಮೆ ಕೇಳಿದ್ದ ನೀವು ನಾಗೇಂದ್ರ ರಕ್ಷಣೆಗೆ ನಿಂತಿದ್ದೇಕೆ..? ಕೋಟಿ-ಕೋಟಿ ಹಣ ತೆಲಂಗಾಣ, ಚೆನ್ನೈಗೆ ಹೋಗಿದೆ ಎನ್ನುತ್ತಿದ್ದಾರೆ.ನಾವು ನಿಮ್ಮದು ದೆಹಲಿ ಕಾಂಗ್ರೆಸ್​ನ ATM ಸರ್ಕಾರ ಎಂದಿದ್ದೆವು ಎಂದು ತಿಳಿಸಿದ್ದಾರೆ.

ಇನ್ನು ಆರೋಪ ಸಾಬೀತು ಮಾಡಿದ್ರೆ ರಾಜೀನಾಮೆ ಕೊಡ್ತೀವಿ ಅಂದಿದ್ರಿ. ವಾಲ್ಮೀಕಿ ನಿಗಮದ ಹಣ ಲೂಟಿಯಿಂದ ಇದು ಸಾಬೀತಾಗಿದೆ. ಈಗ ಕಾಂಗ್ರೆಸ್​ ನಾಯಕರೇ ರಾಜೀನಾಮೆ ಕೊಡ್ತೀರಾ ? ರಾಹುಲ್​ ಗಾಂಧಿ ಅವರ ಟಕಾಟಕ್​ ವರ್ಗಾವಣೆ ಅಂದ್ರೆ ಇದೇನಾ. ಅಕ್ರಮದ ಹಣವನ್ನು ಟಕಾಟಕ್​ ವರ್ಗಾವಣೆ ಮಾಡಿದ್ದೀರಾ ಎಂದು ಸಿದ್ದು ಸರ್ಕಾರಕ್ಕೆ ವಿಪಕ್ಷ ನಾಯಕ ಆರ್​.ಅಶೋಕ್​ ಸರಣಿ ಪ್ರಶ್ನೆ ಹಾಕಿದ್ದಾರೆ.

 ಇದನ್ನೂ ಓದಿ : ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಕೇಸ್​​ಗೆ ಮೇಜರ್ ಟ್ವಿಸ್ಟ್ : ಚಂದ್ರಶೇಖರ್ ಮೇಲೆ ನೇರ ಒತ್ತಡ ಹೇರಿದ್ದ ಸಚಿವರು..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here