Download Our App

Follow us

Home » ಸಿನಿಮಾ » ಯಶಸ್ವಿಯಾಗಿ ನಡೆದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಮಹಾಸಭೆ..!

ಯಶಸ್ವಿಯಾಗಿ ನಡೆದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಮಹಾಸಭೆ..!

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸರ್ವ ಸದಸ್ಯರ ಸಭೆಯು ಕಳೆದ ಭಾನುವಾರ ಶಿವಾನಂದ ಸರ್ಕಲ್ ನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಿರ್ದೇಶಕರಾದ ಸಾಯಿ ಪ್ರಕಾಶ್, ಜೋಸೈಮನ್, ಟಿ ಎಸ್ ನಾಗಭರಣ, ಬಿ ಎಲ್ ನಾಗಣ್ಣ, ಜೆ ಜಿ ಕೃಷ್ಣ, ಜಯಸಿಂಹ ಮುಸುರಿ, ಟೇಶಿ ವೆಂಕಟೇಶ್, ಪಿ ವಿ ಎಸ್ ಗುರುಪ್ರಸಾದ್ ಮುಂತಾದ ಹಿರಿಯ ನಿರ್ದೇಶಕರೊಂದಿಗೆ ಕಿರಿಯ ನಿರ್ದೇಶಕರುಗಳು ಆಗಮಿಸಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ನಡೆದ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಗೊಳಿಸಿದರು.

ಬೆಳಗ್ಗಿನ ಉಪಾಹಾರದೊಂದಿಗೆ ಪ್ರಾರಂಭವಾದ ಮಹಾಸಭೆಯಲ್ಲಿ ಈ ಹಿಂದಿನ ಪರಿಸ್ಥಿತಿಗಳ ಬಗ್ಗೆ ಚರ್ಚಿಸಿ ಹೊಸ ಯೋಜನೆಗಳ ಬಗ್ಗೆ ರೂಪುರೇಷೆಗಳನ್ನು ಹಾಕಲಾಯಿತು. ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘದ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಎಲ್ಲಾ ಹಿರಿಯ ನಿರ್ದೇಶಕರುಗಳು ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸಿ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಮತ್ತೆ ಪುನಶ್ಚೇತನ ಗೊಂಡಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿದರು.

ಆರು ವರ್ಷಗಳಿಂದ ಸಂಘದ ನವೀಕರಣವೂ ಬಾಕಿ ಉಳಿದಿದ್ದು ಎನ್ನಾರ್ ಕೆ ವಿಶ್ವನಾಥ್ ಅವರು ಅದಕ್ಕೆ ಬೇಕಾದ ಸಂಪೂರ್ಣ ದಾಖಲೆಯನ್ನು ಉಪ ನಿಬಂಧಕರ ಕಛೇರಿಗೆ ಒದಗಿಸಿ ಸಂಘದ ನವೀಕರಣ ಕಾರ್ಯವನ್ನು ಸಂಪೂರ್ಣ ಗೊಳಿಸಿದ್ದಾರೆ. ಇದರಿಂದ ಮತ್ತೆ ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲರು ಮತ್ತು ಅವರ ತಂಡ ಕಟ್ಟಿರುವ ನಿರ್ದೇಶಕರ ಸಂಘಕ್ಕೆ ಜೀವ ಬಂದಿದೆ. ಮಧ್ಯಾಹ್ನದ ಬೋಜನದೊಂದಿಗೆ ಮುಕ್ತಾಯಗೊಳ್ಳಬೇಕಾಗಿದ್ದ ಸರ್ವ ಸದಸ್ಯರ ಸಭೆಯು ಮುಂದುವರಿದು ಯಶಸ್ವಿಯಾಗಿ ಸಾಯಂಕಾಲದವರೆಗೆ ನಡೆಯಿತು. ಅಲ್ಲಿಯವರೆಗೆ ಸದಸ್ಯರು ಕಾದು ಕುಳಿತು ಕಾರ್ಯಕ್ರಮದ ಎಲ್ಲಾ ವಿಚಾರಗಳನ್ನು ಆಲಿಸಿ ಸಹಕರಿಸಿದ್ದು ವಿಶೇಷವಾಗಿತ್ತು.

ಅಧ್ಯಕ್ಷರಾಗಿ ಎನ್ನಾರ್ ಕೆ ವಿಶ್ವನಾಥ್, ಉಪಾಧ್ಯಕ್ಷರಾಗಿ ಎಸ್ ಕೆ ನಾಗೇಂದ್ರ ಅರಸ್, ಜಗದೀಶ್ ಕೊಪ್ಪ, ಕಾರ್ಯದರ್ಶಿಯಾಗಿ ಪಾರ್ಥಸಾರಥಿ ಕೆ, ಜಂಟಿ ಕಾರ್ಯದರ್ಶಿಯಾಗಿ ಎಂ ಡಿ ರಾಮ್ ಪ್ರಸಾದ್, ಖಜಾಂಚಿಯಾಗಿ ಮಂಜುನಾಥ್ ದೈವಜ್ಞ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜೋಸೈಮನ್, ಉಮೇಶ್ ನಾಯಕ್, ಆದಿತ್ಯ ಚಿಕ್ಕಣ್ಣ, ಸೆಬಾಸ್ಟಿನ್ ಡೇವಿಡ್, ಮಳವಳ್ಳಿ ಸಾಯಿಕೃಷ್ಣ, ವಿಶಾಲ್ ಧೀರಜ್, ಬಿ ಶಂಕರ್, ಮರಡಿಹಳ್ಳಿ ನಾಗಚಂದ್ರ ಇವರುಗಳು ಕಾರ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ : ಮತ್ತೆ ಬರಲಿದೆ ‘ನಾ ನಿನ್ನ ಬಿಡಲಾರೆ’ ಚಿತ್ರ : ಹಾರರ್ ಸಿನಿಮಾದ ನಿರ್ದೇಶನಕ್ಕಿಳಿದ ಹೇಮಂತ್ ಹೆಗಡೆ..!

Leave a Comment

DG Ad

RELATED LATEST NEWS

Top Headlines

ಬಸ್ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ – 7 ಮಂದಿ ದಾರುಣ ಸಾವು..!

ಮುಂಬೈ : ಬಸ್‌ ಚಾಲಕನ ನಿಯಂತ್ರಣ ತಪ್ಪಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 7 ಮಂದಿ ಸಾವನ್ನಪ್ಪಿರೋ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಟ್ರಾನ್ಸ್‌ಪೋರ್ಟ್ ಸಂಸ್ಥೆಯ ಬಸ್

Live Cricket

Add Your Heading Text Here