Download Our App

Follow us

Home » ಅಪರಾಧ » ಲೈಸೆನ್ಸ್​ ಇಲ್ಲದೇ ಹೋಟೆಲ್​ ಹೆಸ್ರಲ್ಲಿ ಎಣ್ಣೆ ಸಪ್ಲೈ – ಅಬಕಾರಿ ಇನ್ಸ್​ಪೆಕ್ಟರ್ ರವೀಶ್​ ವಿರುದ್ದ ದೂರು ದಾಖಲು..!

ಲೈಸೆನ್ಸ್​ ಇಲ್ಲದೇ ಹೋಟೆಲ್​ ಹೆಸ್ರಲ್ಲಿ ಎಣ್ಣೆ ಸಪ್ಲೈ – ಅಬಕಾರಿ ಇನ್ಸ್​ಪೆಕ್ಟರ್ ರವೀಶ್​ ವಿರುದ್ದ ದೂರು ದಾಖಲು..!

ಬೆಂಗಳೂರು : ಅಬಕಾರಿ ಇಲಾಖೆಯಿಂದ ಯಾವುದೇ ಲೈಸೆನ್ಸ್‌ ಪಡೆಯದೇ ಅಕ್ರಮವಾಗಿ ರೆಸ್ಟೋರೆಂಟ್​​ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಸಂಬಂಧ “ದಿ ಸಿಕ್ರೇಟ್ ಪ್ಲೇಸ್ ರೆಸ್ಟೋರೆಂಟ್’  ಹಾಗೂ ಅಬಕಾರಿ ಇನ್ಸ್​ಪೆಕ್ಟರ್ ರವೀಶ್ ವಿರುದ್ಧ ದೂರು ದಾಖಲಾಗಿದೆ.

ಅಬಕಾರಿ ಇನ್ಸ್​ಪೆಕ್ಟರ್ ರವೀಶ್
ಅಬಕಾರಿ ಇನ್ಸ್​ಪೆಕ್ಟರ್ ರವೀಶ್

ಅನ್ನಪೂರ್ಣೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ‘ದಿ ಸಿಕ್ರೇಟ್ ಪ್ಲೇಸ್ ರೆಸ್ಟೋರೆಂಟ್’ನಲ್ಲಿ ಯಾವುದೇ ಲೈಸೆನ್ಸ್‌ ಇಲ್ಲದೆ ಕಾಲೇಜಿನ ವಿಧ್ಯಾರ್ಥಿಗಳಿಗೆ, ಅಪ್ರಾಪರಿಗೆ ಎಣ್ಣೆ ಸಪ್ಲೈ ಮಾಡಲಾಗುತ್ತಿತ್ತು. ಈ ಬಗ್ಗೆ ರೆಸ್ಟೋರೆಂಟ್ ವಿರುದ್ದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ಕೊಟ್ರೂ ಕೂಡ ಈವರೆಗೆ ಕ್ರಮ ಆಗಿರಲಿಲ್ಲ. ಅಬಕಾರಿ ಇನ್ಸ್​ಪೆಕ್ಟರ್ ರವೀಶ್​ಗೂ ಈ ಬಗ್ಗೆ ಮಾಹಿತಿ ಕೊಟ್ರೂ ಯಾವುದೇ ರೆಸ್ಪಾನ್ಸ್ ಇರ್ಲಿಲ್ಲ.

ಸದ್ಯ ಚಂದನ್​ ಎಂಬವರು ಅಕ್ರಮ ಮದ್ಯ ಪೂರೈಕೆ ಬಗ್ಗೆ ಅಬಕಾರಿ ಇನ್ಸ್​ಪೆಕ್ಟರ್ ರವೀಶ್ ಹಾಗೂ ರೆಸ್ಟೋರೆಂಟ್ ಮಾಲೀಕನ ವಿರುದ್ದ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದ್ದಾರೆ. ನಿಸರ್ಗ ಫ್ಯಾಮಿಲಿ ರೆಸ್ಟೋರೆಂಟ್​ ಸೇರಿ ಹಲವು ಕಡೆ ಇದೇ ದಂಧೆ ನಡೆಯುತ್ತಿದ್ದು, ನಿಸರ್ಗ ಫ್ಯಾಮಿಲಿ ಒಳಗೆ ಕುಳಿತು ರವೀಶ್ ಮತ್ತು ರೆಸ್ಟೋರೆಂಟ್​ ಮಾಲೀಕರ ಡೀಲ್​ ಈ ಬಗ್ಗೆ ಡೀಲ್​ ಮಾಡಿಕೊಂಡಿದ್ದರು. ಮಂತ್ಲಿ ಫಿಕ್ಸ್ ಮಾಡಿಕೊಂಡು ಅನಧಿಕೃತವಾಗಿ ಎಣ್ಣೆ ಸಪ್ಲೈಗೆ​​ ಅಬಕಾರಿ ಇನ್ಸ್​ಪೆಕ್ಟರ್ ರವೀಶ್ ಪರ್ಮಿಷನ್ ಕೊಟ್ಟಿದ್ದ. ತನ್ನ ವ್ಯಾಪ್ತಿಯ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಮದ್ಯ ಮಾರಲು ರವೀಶ್ ಸಪೋರ್ಟ್​ ಮಾಡುತ್ತಿದ್ದ. ಈ ತಿಂಗಳ ಅಂತ್ಯದಲ್ಲಿ ಇನ್ಸ್​ಪೆಕ್ಟರ್​ ರವೀಶ್ ಟ್ರಾನ್ಸ್​ಫರ್​​ ಆಗ್ತಿದ್ದು, ಇದೀಗ ಅಬಕಾರಿ ಉಪಾಯುಕ್ತರಿಗೆ ರವೀಶ್ ವಿರುದ್ಧ ದೂರು ನೀಡಲಾಗಿದೆ.

ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಶೂಟೌಟ್ ​- ಚಿಕ್ಕಪ್ಪನಿಂದಲೇ ಅಣ್ಣನ ಮಗನ ಕೊಲೆ..!

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here