ಚಿಕ್ಕಬಳ್ಳಾಪುರ : ಜಮೀನು ವಿಚಾರಕ್ಕೆ ಒಂದೇ ಕುಟುಂಬದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರ ಎದುರಲ್ಲೇ ಬಡಿದಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಮೋಟ್ಲುರು ಗ್ರಾಮದಲ್ಲಿ ನಡೆದಿದೆ.
ಸಿನಿಮೀಯ ರೀತಿ ಮಹಿಳೆಯರು, ಪುರುಷರು ಹೊಡೆದಾಡಿಕೊಂಡಿದ್ದು, ಕೈಗೆ ಸಿಕ್ಕ ಕಲ್ಲು ಮಣ್ಣು ಗಿಡಗಳಿಂದ ಕುಟುಂಬಸ್ಥರು ಬಡೆದಾಡಿಕೊಂಡಿದ್ದಾರೆ. ಚೌಡಮ್ಮ ಎಂಬವರ ಹೆಸರಲ್ಲಿದ್ದ 2.17 ಗುಂಟೆ ಜಮೀನು ಇತ್ತು.
2.17 ಗುಂಟೆ ಜಮೀನು ಚೌಡಮ್ಮ, ನಾಗಪ್ಪ, ಮುನಿ ಅಕ್ಕಯಮ್ಮನಿಗೂ ಸೇರಬೇಕಾಗಿದೆ. ಆದರೆ ಚೌಡಮ್ಮ 40 ವರ್ಷಗಳಿಂದ ಒಡಹುಟ್ಟಿದವರಿಗೆ ಜಮೀನು ನೀಡದೆ ಸತಾಯಿಸಿದ್ದಳು. ಹಾಗಾಗಿ ಕುಟುಂಬಸ್ಥರ ನಡುವೆಯೇ ಜಗಳ ನಡೆದಿದೆ. ಗಲಾಟೆಯಲ್ಲಿ ಗಾಯಗೊಂಡವರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ನಾಗೇಂದ್ರ ಬೆನ್ನಲ್ಲೇ ಆರೋಪಿ ಸತ್ಯನಾರಾಯಣ ವರ್ಮಾ ED ಕಸ್ಟಡಿಗೆ..!
Post Views: 102