Download Our App

Follow us

Home » ಸಿನಿಮಾ » ‘ಕಲ್ಕಿ 2898 AD’ ಚಿತ್ರದ ಐದನೇ ಸೂಪರ್ ಸ್ಟಾರ್ ಯಾರು? : ಮೇ.22ರಂದು ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ..!

‘ಕಲ್ಕಿ 2898 AD’ ಚಿತ್ರದ ಐದನೇ ಸೂಪರ್ ಸ್ಟಾರ್ ಯಾರು? : ಮೇ.22ರಂದು ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ..!

‘ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದ್ದು, ಆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.
ಈ ಐದನೇ ಸೂಪರ್ ಸ್ಟಾರ್ ಯಾರು? ಈ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯೂಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಲಾಗಿದೆ. ‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.

ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್‍ ನೀಡಲಾಗಿದ್ದು, ಈ ಐದನೇ ಸೂಪರ್ ಸ್ಟಾರ್ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರವರೆಗೂ ಕಾಯಬೇಕು.

ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‍ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‍ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ : ಪ್ರಜ್ವಲ್​ ಸೇರಿ ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗಲಿ – ಆರ್​ ಅಶೋಕ್..!

Leave a Comment

DG Ad

RELATED LATEST NEWS

Top Headlines

ನಿಶ್ಚಿತಾರ್ಥ ಮಾಡಿಕೊಂಡ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು – ಮದುವೆ ಯಾವಾಗ?

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಉದ್ಯಮಿ ವೆಂಕಟ ದತ್ತ ಸಾಯಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಫೋಟೋವನ್ನು ಸಿಂಧು ಅವರು ಸಾಮಾಜಿಕ ಜಾಲತಾಣಗಳಲ್ಲಿ

Live Cricket

Add Your Heading Text Here