ಬೆಂಗಳೂರು : ಪ್ರತಿಷ್ಠಿತ ವಿಬಿ ಬೇಕರಿ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ವಿವಿ ಪುರಂ, ಸಜ್ಜನರಾವ್ ಸರ್ಕಲ್ ಬಳಿ ಇರುವ ವಿಬಿ ಬೇಕರಿಯ ಮಾಲೀಕ ಲಕ್ಷ ಲಕ್ಷ ಬಟರ್ ಖರೀದಿಸಿ ಹಣ ಕೊಡದೆ ಸತಾಯಿಸುತ್ತಿರುವುದಾಗಿ ಹಾಲು ವ್ಯಾಪಾರಿ ಶಿವಶಂಕರ್ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.
ಹಾಲು ವ್ಯಾಪಾರಿ ಶಿವಶಂಕರ್ ಹಲವು ವರ್ಷಗಳಿಂದ ಬೇಕರಿಗೆ ಬೆಣ್ಣೆ ಸಪ್ಲೈ ಮಾಡುತ್ತಿದ್ದರು. ಪ್ರತಿಷ್ಠಿತ ವಿಬಿ ಬೇಕರಿ ಮಾಲೀಕ ಕೋವಿಡ್ ಸಮಯದಿಂದ ಬೆಣ್ಣೆ ಪಡೆದಿದ್ದರು. ಆದರೆ ಮಾಲೀಕ ಲಕ್ಷ ಲಕ್ಷ ಬಟರ್ ಖರೀದಿಸಿ ಐದು ವರ್ಷ ಕಳೆದರು ಹಣ ನೀಡದೆ ಸತಾಯಿಸುತ್ತಿರುವುದಾಗಿ ಗಂಭೀರ ಆರೋಪ ಕೇಳಿಬಂದಿದೆ.
ಶಿವಶಂಕರ್ ಎಷ್ಟೇ ಬೇಡಿಕೊಂಡ್ರು, ವಿಬಿ ಬೇಕರಿ ಮಾಲೀಕ ಕೆಲವು ತಿಂಗಳಿಂದ 7 ಲಕ್ಷ ಹಣ ಬಾಕಿ ಉಳಿಸಿಕೊಂಡು ಆಟ ಆಡುತ್ತಿದ್ದಾರಂತೆ. ಅಷ್ಟೇ ಅಲ್ಲದೇ ಹಣ ಕೊಡಲು ಹಿಂದೇಟು ಹಾಕುತ್ತಿದ್ದು, ದಿನಕ್ಕೆ ಒಂದು ಸಾವಿರ ರೂ. ಕೊಡ್ತಿವಿ ಅಂತ ಉಡಾಫೆ ಉತ್ತರ ಕೊಡ್ತಿದ್ದಾರಂತೆ. ಇದ್ದರಿಂದ ನೊಂದ ಹಾಲು ವ್ಯಾಪಾರಿ ಶಿವಶಂಕರ್ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ : ಜೊತೆಯಲ್ಲಿದ್ದ ಆಪ್ತನಿಂದಲೇ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂನಲ್ಲಿ ಕಳ್ಳತನ – ಆರೋಪಿ ಅರೆಸ್ಟ್..!