ಬೆಂಗಳೂರು : ಜೊತೆಯಲ್ಲಿದ್ದ ಆಪ್ತನೇ ಗೆಳೆಯನ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಂನಲ್ಲಿ ಕಳ್ಳತನ ಮಾಡಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿತಿನ್ ಎಂಬ ವ್ಯಕ್ತಿ ಕಳ್ಳತನ ಮಾಡಿರುವ ಆರೋಪಿ.
ಭಾವನಾ ಕಾರ್ಸ್ ಎಂಬ ಸೆಕೆಂಡ್ ಹ್ಯಾಂಡ್ ಶೋ ರೂಂನಲ್ಲಿ ಕಳ್ಳತನ ನಡೆದಿದೆ. ಹಲವು ದಿನಗಳಿಂದ ಆರೋಪಿ ಭಾವನಾ ಕಾರ್ಸ್ ಮಾಲೀಕರ ಜೊತೆಯಲ್ಲೇ ಇದ್ದನು. ಮಾಲೀಕ ಕೆಂಪೇಗೌಡಗೆ ತಿಳಿಯದ ಹಾಗೆ ನಿತಿನ್ ಕಚೇರಿಯ ಕೀ ಪಡೆದುಕೊಂಡಿದ್ದನು.
ಮಾಲೀಕನಿಂದ ಕೀ ಪಡೆದ ನಿತಿನ್ ಮಧ್ಯರಾತ್ರಿ 1.30 ಸುಮಾರಿಗೆ ಕ್ಯಾಪ್ ಮಾಸ್ಕ್ ಹಾಕಿ ಕಚೇರಿಗೆ ಎಂಟ್ರಿ ಕೊಟ್ಟಿದ್ದಾನೆ. ನಂತರ ಆಫೀಸ್ ಡ್ರಾಯರ್ನಲ್ಲಿದ್ದ ಒಂದು ಲಕ್ಷ ನಗದು ಹಣ ಕಳ್ಳತನ ಮಾಡಿ ಆಫೀಸ್ ಮುಂಭಾಗದಲ್ಲಿದ್ದ ಕಾರನ್ನು ಕದ್ದು ರೌಂಡ್ಸ್ ಹಾಕಿ ಮತ್ತೆ ವಾಪಸ್ ಬಂದಿದ್ದಾನೆ. ಬಳಿಕ ಆಫೀಸ್ ಮುಂದೆ ಕಾರ್ ಬಿಟ್ಟು ಹೋಗುವಾಗ ಕಾರಿನ ಕೀ ಗೇಟ್ ಬಳಿ ಎಸೆದು ಎಸ್ಕೇಪ್ ಆಗಿದ್ದಾನೆ.
ಸಿಸಿಟಿವಿ ಪರಿಶೀಲಿಸಿ ಭಾವನಾ ಕಾರ್ಸ್ ಮಾಲೀಕ ಕೆಂಪೇಗೌಡ ಗಿರಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ನಿತಿನ್ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಜಯೇಂದ್ರ ಹಾಗೂ ಡಿಸಿಎಂ ಡಿಕೆಶಿ ಇಬ್ಬರು ಭಷ್ಟ್ರರೇ – ಶಾಸಕ ಯತ್ನಾಳ್ ಗುಡುಗು..!