ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರಾಜರಾಜೇಶ್ವರಿನಗರ ಮಲ್ಲತ್ತಹಳ್ಳಿ ಗ್ರಾಮ ನಂ.6 ಮತ್ತು 7ರಲ್ಲಿರುವ ಕಟ್ಟಡದ ಮಾಲೀಕರಾದ ಜಿ.ಲಕ್ಷ್ಮಿ ಪ್ರಸಾದ್ ಮತ್ತು GPA ಹೋಲ್ಡರ್ (ಜನರಲ್ ಪವರ್ ಆಫ್ ಅಟಾರ್ನಿ), M D. ಹರ್ದೀಪ್ ಮತ್ತು ವಿಜಯಕುಮಾರ್, ಪಾಲುದಾರರಾದ ಲಕ್ವಿನ್ ಡೆವಲಪರ್ಸ್ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.
RR ನಗರದ ಸರ್ವೆ ನಂ 6 ಮತ್ತು 7 ರಲ್ಲಿ ಕಟ್ಟಡ ನಿರ್ಮಾಣವಾಗಿತ್ತು. RR ನಗರ ಮಲ್ಲತ್ತಹಳ್ಳಿ ಪಾಲಿಕೆಯಲ್ಲಿ ಮಾಲೀಕರು ಮೂರು ಅಂತಸ್ತಿಗೆ ಅನುಮತಿ ಪಡೆದಿದ್ದರು, ನಂತರ ಅನುಮತಿ ಪತ್ರವನ್ನು ನಕಲಿ ಮಾಡಿ ಆರು ಅಂತಸ್ತಿನ ಕಟ್ಟಡ ಕಟ್ಟಿದ್ದರು. ಜೊತೆಗೆ 20 ವಸತಿ ಕಟ್ಟಡ ನಿರ್ಮಾಣ ಮಾಡಿರೋದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ಬಿಬಿಎಂಪಿ ಕಾಯ್ದೆ 2020,ಸೆಕ್ಷನ್ 248(1),248(2) ಮತ್ತು 248(3) ಅಡಿಯಲ್ಲಿ ದೂರು ದಾಖಲಾಗಿದೆ. ಸದ್ಯ ಮಾಲೀಕ ಸೇರಿ ಭಾಗಿಯಾದವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ : ನಾಳೆ ರಾಜ್ಯಾದ್ಯಂತ ‘ಉಗ್ರಾವತಾರ’ ಸಿನಿಮಾ ರಿಲೀಸ್ – ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಿದ ಪ್ರಿಯಾಂಕಾ ಉಪೇಂದ್ರ..!