Download Our App

Follow us

Home » ಅಪರಾಧ » ದರ್ಶನ್​ ಗ್ಯಾಂಗ್ ಸುಮನಹಳ್ಳಿ ಬಳಿ ರೇಣುಕಾಸ್ವಾಮಿಯ ಶವ ಬಿಸಾಡಿ ಹೋಗುವ ಸ್ಫೋಟಕ ದೃಶ್ಯ ರಿವೀಲ್​..!

ದರ್ಶನ್​ ಗ್ಯಾಂಗ್ ಸುಮನಹಳ್ಳಿ ಬಳಿ ರೇಣುಕಾಸ್ವಾಮಿಯ ಶವ ಬಿಸಾಡಿ ಹೋಗುವ ಸ್ಫೋಟಕ ದೃಶ್ಯ ರಿವೀಲ್​..!

ರೇಣುಕಾಸ್ವಾಮಿ ಕೊಲೆ ಕೇಸ್​ ಆರೋಪದ ಮೇಲೆ ದರ್ಶನ್ ಅಂಡ್​ ಗ್ಯಾಂಗ್ ಮಾಡಿದ ಅಟ್ಟಹಾಸ, ಕ್ರೌರ್ಯದ ಬಗ್ಗೆ ಕಳೆದೆರಡು ದಿನಗಳಿಂದ ರಾಜ್ಯದ ಜನರಿಗೆ ಶಾಕ್​ ಆಗ್ತಿದೆ. ಮೇಲಿಂದ ಮೇಲೆ ಆ ನರಕ ಸದೃಶ ವಾತಾವರಣದಲ್ಲಿ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿಯ ಅಸಹಾಯಕತೆ ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡ್ತಿದೆ. ಈ ಮಧ್ಯೆ ಮತ್ತೆ ಮತ್ತೆ ಪೋಟೋಗಳು ರಿಲೀಸ್ ಆಗ್ತಿವೆ.

ರೇಣುಕಾಸ್ವಾಮಿಗೆ ದರ್ಶನ್​ ಗ್ಯಾಂಗ್​ ಬದುಕಿದ್ದಾಗಲೇ ನರಕ ತೋರಿಸಿ, ಕ್ರೂರಿಗಳಂತೆ ಕೊಲೆ ಮಾಡಿತ್ತು. ಪರಿ ಪರಿಯಾಗಿ ರೇಣುಕಾಸ್ವಾಮಿ ಬೇಡಿಕೊಳ್ಳುತ್ತ ಕಣ್ಣೀರಿನ ಜೊತೆ ನೆತ್ತರು ಸುರಿಸಿದ್ರೂ ಬಿಡದ ಪಾಪಿಗಳು ಕ್ರೂರವಾಗಿ ಹೊಡೆದು ಸಾಯಿಸಿದ್ದು, ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಲಾಠಿ, ಮೆಗ್ಗರ್, ಹಗ್ಗ, ಸಿಕ್ಕ ಸಿಕ್ಕ ಆಯುಧಗಳನ್ನು ಹಿಡಿದು ಬಡಿದು ಕೊಲೆ ಮಾಡಿದ್ದು ಅಪರಾಧದ ಪುಟದಲ್ಲಿ ರೆಕಾರ್ಡ್​ ಆಗಿದೆ. ಮೊನ್ನೆ ಎರಡು ಪೋಟೋ, ನಿನ್ನೆ ಮೈಸೂರಿನ ಹೋಟೆಲ್​ ಮುಂದಿನ ಫೋಟೋ ಬೆನ್ನಲ್ಲೇ ಸದ್ಯ ಮತ್ತೆ ಡಿ ಗ್ಯಾಂಗ್ ಕಠೋರವಾಗಿ​ ವರ್ತಿಸಿದ ಪೋಟೋಗಳು ರಿಲೀಸ್ ಆಗಿವೆ.

ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ದರ್ಶನ್​ ಗ್ಯಾಂಗ್ ಬಿಸಾಡಲು ಪ್ಲಾನ್ ಮಾಡಿತ್ತು. ಅದರಂತೆ ಸುಮ್ಮನಹಳ್ಳಿ ರಾಜಕಾಲುವೆ ಬಳಿ ಆರೋಪಿಗಳು ಯಾರ ಭಯವು ಇಲ್ಲದೇ ಶವವನ್ನು ಬೇಕಾಬಿಟ್ಟಿ ಬಿಸಾಡಿ ಹೋಗಿದ್ದರು. ಶವ ಎಸೆದು ಹೋಗುತ್ತಿರುವ ಫೋಟೋ ಬಿಟಿವಿಗೆ ಲಭ್ಯವಾಗಿದೆ. ಮೃತದೇಹವನ್ನು ಬಿಸಾಡಿದ ಬಳಿಕ ಆರೋಪಿಗಳು ತೆರಳುತ್ತಿರುವ ಫೋಟೋಗಳು ಸಿಕ್ಕಿವೆ. ಕಾರ್ತಿಕ್, ನಿಖಿಲ್, ರಾಘವೇಂದ್ರ ಇರುವ ಫೋಟೋಗಳು ಸೆರೆಯಾಗಿವೆ. ಬಿಳಿ ಸ್ಕಾರ್ಪಿಯೋದಲ್ಲಿ ಬಂದು ಮೃತದೇಹ ಬಿಸಾಡಿ ಬಳಿಕ ಕಾರಿನಲ್ಲಿ ಹೋಗದೆ 5 ನಿಮಿಷ ಬಿಟ್ಟು ಹಂತಕರು ನಡೆದೇ ಹೋಗಿದ್ದರು. ಈ ಎಲ್ಲಾ ಸಿಸಿಟಿವಿ ದೃಶ್ಯವನ್ನ ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಒಟ್ಟಾರೆ ಪೊಲೀಸರು ಕೋರ್ಟ್​ಗೆ 3991 ಪುಟಗಳಷ್ಟು ದರ್ಶನ್​ ಗ್ಯಾಂಗ್ ಮಾಡಿದ ಕ್ರೈಂ ಶೀಟ್​ನ್ನು ನೀಡಿದ್ದಾರೆ. ಅದರಲ್ಲಿರುವ ಒಂದೊಂದು ಪುಟವೂ ದರ್ಶನ್ ಮತ್ತು ಗ್ಯಾಂಗ್​ನ ಕರಾಳ ಮೃಗೀಯ ವರ್ತನೆಯನ್ನು ತೆರೆದಿಡುತ್ತಿವೆ.

ಇದನ್ನೂ ಓದಿ : ಧಾರವಾಡ ಕರ್ನಾಟಕ ವಿವಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ – ಸೆರೆ ಹಿಡಿಯುವಂತೆ ವಿದ್ಯಾರ್ಥಿಗಳು ಮನವಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here