Download Our App

Follow us

Home » ಕ್ರೀಡೆ » ಇಂದು RCB-RR ನಡುವೆ ರಣ ರೋಚಕ ಪಂದ್ಯ​ – ಪಿಚ್, ವೆದರ್​ ರಿಪೋರ್ಟ್ ಹೇಗಿದೆ?

ಇಂದು RCB-RR ನಡುವೆ ರಣ ರೋಚಕ ಪಂದ್ಯ​ – ಪಿಚ್, ವೆದರ್​ ರಿಪೋರ್ಟ್ ಹೇಗಿದೆ?

ಅಹಮದಾಬಾದ್ : ಐಪಿಎಲ್​ 2024 – ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇಂದು ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಉಭಯ ತಂಡಗಳು ಇದುವರೆಗಿನ ಐಪಿಎಲ್ ಆವೃತ್ತಿಯಲ್ಲಿ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆರ್​ಸಿಬಿ 15, ರಾಜಸ್ಥಾನ್ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೇ ರದ್ದಾಗಿದೆ.

ಹಾಗೆಯೇ ಪ್ಲೇಆಫ್ ಹಂತದಲ್ಲಿ ಆರ್​ಸಿಬಿ ಮತ್ತು ಆರ್​ಆರ್ ತಂಡಗಳು ಒಂದು ಬಾರಿ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. 2015 ರಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 71 ರನ್​ಗಳಿಂದ ಸೋಲಿಸಿ ಆರ್​ಸಿಬಿ 2ನೇ ಕ್ವಾಲಿಫೈಯರ್​ಗೆ ಪ್ರವೇಶಿಸಿತ್ತು.ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೇಲುಗೈ ಹೊಂದಿರುವುದು ಸ್ಪಷ್ಟ. ಹೀಗಾಗಿಯೇ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಆರ್​ಸಿಬಿ ಗುರುತಿಸಿಕೊಂಡಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಸಾಧನೆ : 16 ಆವೃತ್ತಿ ಕಳೆದರೂ ಈವರೆಗೆ ಒಂದು ಬಾರಿಯೂ ಟ್ರೋಫಿ ಗೆಲ್ಲದ ಆರ್‌ಸಿಬಿ 9 ಬಾರಿ ಪ್ಲೇ ಆಫ್‌ ಪ್ರವೇಶಿಸಿದೆ. 2009, 2011 ಹಾಗೂ 2016ರಲ್ಲಿ ಮೂರು ಬಾರಿ ಫೈನಲ್‌ ಪ್ರವೇಶಿಸಿದೆ. ಆದ್ರೆ ಈ ವರೆಗೆ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.

ರಾಜಸ್ಥಾನ್‌ ರಾಯಲ್ಸ್‌ ಸಾಧನೆ : 2008ರ ಐಪಿಎಲ್‌ ಉದ್ಘಾಟನಾ ಆವೃತ್ತಿಯಲ್ಲೇ ಚಾಂಪಿಯನ್‌ ಆಗಿ ಹೊರಹೊಮ್ಮಿದ ತಂಡ ರಾಜಸ್ಥಾನ್‌ ರಾಯಲ್ಸ್‌. ಇದಾದ ಬಳಿಕ 2022ರ ಆವೃತ್ತಿಯಲ್ಲಿ 2ನೇ ಬಾರಿಗೆ ಫೈನಲ್‌ ಪ್ರವೇಶಿಸಿ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. 2024ರ ಆವೃತ್ತಿಯಲ್ಲಿ ಲೀಗ್‌ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ 6ನೇ ಬಾರಿ ಫೈನಲ್‌ ಪ್ರವೇಶಿಸಿದೆ.

ವೆದರ್​ ಹೇಗಿದೆ? ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ವಾತವರಣವು ಸ್ವಚ್ಛವಾಗಿದ್ದು, ಆಕಾಶವು ಶುಭ್ರ ನೀಲಿಯಿಂದ ಕೂಡಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇಂದು ಮಳೆಯ ಬರುವ ನಿರೀಕ್ಷೆ ತೀರಾ ಕಡಿಮೆಯಿದೆ. ಅಂದರೆ ಮಳೆ ಬರುವುದಿಲ್ಲ, ಅಡ್ಡಿ ಪಡಿಸುವುದಿಲ್ಲ ಎಂದು ವರದಿಯಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ : ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿರುವ ನರೇಂದ್ರ ಮೋದಿ ಮೈದಾನದಲ್ಲಿ 2024ರ ಐಪಿಎಲ್‌ನಲ್ಲಿ 7 ಪಂದ್ಯಗಳು ನಡೆದಿವೆ. ಆದರೆ ಇವುಗಳಲ್ಲಿ ಒಂದು ಮಳೆಗೆ ವಾಶ್‌ಔಟ್ ಆಗಿದೆ. ಪಿಚ್ ಇದುವರೆಗೆ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ನೆರವಾಗಿದೆ. ಎರಡು ಬಾರಿ 200 ಪ್ಲಸ್ ಸ್ಕೋರ್‌ ಅನ್ನು ಬೆನ್ನಟ್ಟಲಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಕೇವಲ 89ಕ್ಕೆ ಆಲೌಟ್‌ಗೆ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಸಾಕ್ಷಿಯಾಗಿದೆ. ಹೀಗಾಗಿ ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಪಿಚ್ ಸಮಾನವಾಗಿ ಸಹಕರಿಸುವ ಬಹಳಷ್ಟು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಅಪಘಾತವಾಗಿದ್ದ ಕಾರನ್ನು ಬೇರೆಡೆ ಎಳೆದೊಯ್ಯುವಾಗ ಅವಘಡ – ಇದ್ದಕಿದ್ದಂತೆ ರಸ್ತೆ ಮಧ್ಯೆ ಆಗಿದ್ದೇನು?

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here