Download Our App

Follow us

Home » ರಾಷ್ಟ್ರೀಯ » ಪರೀಕ್ಷೆ ವೇಳೆ ನಿದ್ರೆ ಕಂಟ್ರೋಲ್​​ಗೆ ಉಗ್ರರು ನುಂಗುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು..!

ಪರೀಕ್ಷೆ ವೇಳೆ ನಿದ್ರೆ ಕಂಟ್ರೋಲ್​​ಗೆ ಉಗ್ರರು ನುಂಗುವ ಮಾತ್ರೆ ಸೇವಿಸುತ್ತಿರುವ ವಿದ್ಯಾರ್ಥಿಗಳು..!

ಪರೀಕ್ಷೆ ಸಮಯ ಹತ್ತಿರ ಬಂತೆಂದು ನಿದ್ರೆ ಕಂಟ್ರೋಲ್​​ಗೆ ವಿದ್ಯಾರ್ಥಿಗಳು ಉಗ್ರರು ತೆಗೆದುಕೊಳ್ಳುವಂತಹ ಮಾತ್ರೆ ಸೇವಿಸುತ್ತಿರುವ ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಪರೀಕ್ಷೆ ವೇಳೆ ನಿದ್ರೆ ತಡೆಯಲು ವಿದ್ಯಾರ್ಥಿಗಳು ಉಗ್ರರು ಸೇವಿಸುವ  ಮಾತ್ರೆಗಳನ್ನು ಸೇವಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಗ್ರರು ನಿದ್ರೆ ಕಂಟ್ರೋಲ್​​ಗೆ ಸೇವಿಸುವ ಮಾತ್ರೆ ಇದಾಗಿದ್ದು, ಇದನ್ನು ನುಂಗಿದರೆ 40 ಗಂಟೆಗಳ ಕಾಲ ನಿದ್ರೆ ಬರುವುದಿಲ್ಲ, ಈ ಆಘಾತಕಾರಿ ವಿಚಾರವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಉತ್ತರ ಪ್ರದೇಶದ ಪ್ರಜಕ್ತಾ ಸ್ವರೂಪ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಹೀಗಾಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಈಕೆ ಏಕಾಏಕಿ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ತಪಾಸಣೆ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ನರಗಳು ಊದಿಕೊಂಡಿತ್ತು, ಈ ವೇಳೆ ಉಗ್ರರು ನುಂಗುವ ಮಾತ್ರೆ ಸೇವಿಸಿರುವುದು ತಿಳಿದುಬಂದಿದೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ವಿದ್ಯಾರ್ಥಿನಿ, ನಿದ್ದೆ ಬರದಂತೆ ಮಾತ್ರೆ ನುಂಗುತ್ತಿದ್ದೆ ಎಂದಿದ್ದಳು. ವಿದ್ಯಾರ್ಥಿ ಓದುತ್ತಿದ್ದ ಕೊಠಡಿಯಲ್ಲಿ ನಿದ್ದೆ ತಡೆಯುವ ಮಾತ್ರೆಯ ಬಾಟಲ್ ಪತ್ತೆಯಾಗಿದ್ದು, ಪೋಷಕರು ಆಘಾತಕ್ಕೊಳಗಾಗಿದ್ದರು. ವೈದ್ಯರು ಅದನ್ನು ನೋಡಿ ಆ ಮಾತ್ರೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ.  ಪೋಷಕರು ಮಕ್ಕಳ ಮೇಲೆ ನಿಗಾ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮಹಿಳೆಯರು ಸೇರಿ 59 ಜನರ ವಿರುದ್ಧ FIR..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here