Download Our App

Follow us

Home » ಅಪರಾಧ » ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮಹಿಳೆಯರು ಸೇರಿ 59 ಜನರ ವಿರುದ್ಧ FIR..!

ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣ : ಮಹಿಳೆಯರು ಸೇರಿ 59 ಜನರ ವಿರುದ್ಧ FIR..!

ಬಾಗಲಕೋಟೆ : ರಂಭಾಪುರಿ ಶ್ರೀಗಳ ಕಾರಿನ ಮೇಲೆ ಚಪ್ಪಲಿ ಎಸೆತ ಪ್ರಕರಣದಲ್ಲಿ ಮಹಿಳೆಯರು ಸೇರಿದಂತೆ 59 ಜನರ ವಿರುದ್ಧ FIR ದಾಖಲಾಗಿದೆ. ಈ ಸಂಬಂಧ ಶ್ರೀಗಳ ಭಕ್ತರೊಬ್ಬರು ಕಲಾದಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ 59 ಮಂದಿ ವಿರುದ್ಧ FIR ದಾಖಲಾಗಿದೆ.

ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಮಠಕ್ಕೆ SP ಅಮರನಾಥರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾರೇ ಕಾನೂನು ಕೈಗೆ ತೆಗೆದುಕೊಂಡ್ರು ಸೂಕ್ತ ಕ್ರಮ ಜರುಗಿಸೋದಾಗಿ ಹೇಳಿದ್ದಾರೆ.

ವಿವಾದ ಕೋರ್ಟ್​​ನಲ್ಲಿರುವಾಗ ಕಾನೂನು ಸುವ್ಯವಸ್ಥೆ ಹಾಳು, ಶಾಂತಿ ಕದಡುವ ಉದ್ದೇಶದ ಗಲಾಟೆ ಮತ್ತು ಶ್ರೀಗಳಿಗಾದ ಅವಮಾನ ಎಲ್ಲವನ್ನೂ ಪರಿಗಣಿಸಿ ಎಫ್​​ಐಆರ್​ ದಾಖಲಿಸಲಾಗಿದೆ. ​

ರಂಭಾಪುರಿಶ್ರೀ ಕಲಾದಗಿ ಮಠದ ಉತ್ತರಾಧಿಕಾರಿಯಾಗಿ ಕೆ.ಎಂ.ಗಂಗಾಧರ ಸ್ವಾಮೀಜಿಯನ್ನು ಆಯ್ಕೆ ಮಾಡಿದ್ದರು. ಇದನ್ನು ಕಳೆದ ಕೆಲವು ವರ್ಷಗಳ ಹಿಂದೆಯೇ ಗ್ರಾಮದ ಕೆಲವರು ವಿರೋಧಿಸಿದ್ದರು. ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ರಾಮ ಮಂದಿರ ಕಟ್ಟಿಲ್ಲ : ಸಚಿವ ಸಂತೋಷ್ ಲಾಡ್..!

Btv Kannada1
Author: Btv Kannada1

Leave a Comment

RELATED LATEST NEWS

Top Headlines

ಖಾಕಿ ಕೋಟಿ ದಂಧೆ : ಮೆಜೆಸ್ಟಿಕ್​ನಲ್ಲಿ ಖಾಸಗಿ ಬಸ್​ಗೆ ಬೆಂಕಿ ಬಿದ್ದಿರೋ ಹಿಂದಿದೆ ಮಹಾ ಭ್ರಷ್ಟಾಚಾರ – ಪೊಲೀಸರ ಲಂಚದ ವಿಡಿಯೋ ಲೀಕ್..!

ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್​ನಲ್ಲಿ ದಿನ ನಿತ್ಯ ಸಾವಿರಾರು ಜನರು ಒಡಾಡ್ತಾರೆ. ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿ ಏರಿಯಾದಲ್ಲಿ ನಿನ್ನೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ

Live Cricket

Add Your Heading Text Here