Download Our App

Follow us

Home » ಅಂತಾರಾಷ್ಟ್ರೀಯ » ‘ಡ್ರ್ಯಾಗನ್​ ರಾಷ್ಟ್ರ’ದಲ್ಲಿ ಮತ್ತೆ ಮಹಾಮಾರಿ ‘ಕೊರೋನಾ’ ಸ್ಫೋಟ – ಜಗತ್ತಿಗೆ ಶುರುವಾಯ್ತು ಆತಂಕ!

‘ಡ್ರ್ಯಾಗನ್​ ರಾಷ್ಟ್ರ’ದಲ್ಲಿ ಮತ್ತೆ ಮಹಾಮಾರಿ ‘ಕೊರೋನಾ’ ಸ್ಫೋಟ – ಜಗತ್ತಿಗೆ ಶುರುವಾಯ್ತು ಆತಂಕ!

ಕೊರೋನಾ ಎನ್ನುವ ಮಹಾಮಾರಿಯ ಹೊಡೆತದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಲಕ್ಷಾಂತರ ಮಂದಿ ಜೀವ ತೆಗೆದ, ಸಾವಿರಾರು ಕುಟುಂಬಗಳನ್ನು ಬೀದಿಪಾಲು ಮಾಡಿದ ಮಾರಕ ವೈರಸ್‌ ನೆನಪಿಸಿಕೊಂಡರೆ ಜಗತ್ತು ಈಗಲೂ ಬೆಚ್ಚಿಬೀಳುತ್ತದೆ. ಕೋವಿಡ್ -19 ಜಗತ್ತಿಗೆ ಹರಡಿ 5 ವರ್ಷಗಳ ಬಳಿಕ ಇದೀಗ ಡ್ರ್ಯಾಗನ್​ ರಾಷ್ಟ್ರ ಚೀನಾದಲ್ಲಿ ಮತ್ತೆ ಕೊರೋನಾ ವೈರಸ್​ ಸ್ಪೋಟಗೊಂಡಿದೆ. ಪರಿಣಾಮ ಚೀನಾದಲ್ಲಿ ಮತ್ತದೇ ನರಕ ಸದೃಶ ಸ್ಥಿತಿ ನಿರ್ಮಾಣವಾಗಿದೆ.

ಹೌದು.. ಚೀನಾ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಈಗ ದೊಡ್ಡ ತಲೆನೋವಾಗುವ ಎಲ್ಲಾ ಲಕ್ಷಣ ತೋರಿಸಿದೆ. ಚೀನಾ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಪೋಸ್ಟ್‌ಗಳು ಈ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಖಚಿತಪಡಿಸಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದರೆ ಸ್ಮಶಾನಗಳಲ್ಲಿ ಕೂಡ ಹೆಣಗಳ ಸಂಖ್ಯೆ ಹೆಚ್ಚಿರುವುದನ್ನು ಅನೇಕ ಪೋಸ್ಟ್‌ಗಳು ತಿಳಿಸಿವೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ ಆಸ್ಪತ್ರೆಗಳಲ್ಲಿ ರೋಗಿಗಳು ಕಿಕ್ಕಿರಿದು ತುಂಬಿರುವುದನ್ನು ನೋಡಬಹುದು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು, ಇನ್‌ಫ್ಲುಯೆನ್ಸ ಎ, ಹೆಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳು ಹರಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವೈರಸ್ ಹರಡುವುದನ್ನು ತಪ್ಪಿಸಲು ಚೀನಾ ತುರ್ತು ಪರಿಸ್ಥಿತಿ ಘೋಷಿಸಿದೆ ಎಂದು ಹೇಳಲಾಗಿದ್ದರೂ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ಹೆಚ್‌ಎಂಪಿವಿ ಜ್ವರ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ. ಇದೂ ಕೂಡ ಕೋವಿಡ್-19 ರೀತಿಯ ರೋಗ ಲಕ್ಷಣಗಳನ್ನು ಹೊಂದಿದೆ, ವೈರಸ್ ಹರಡುತ್ತಿದ್ದು ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

SARS-CoV-2 (Covid-19) ಎಕ್ಸ್‌ ಹ್ಯಾಂಡಲ್‌ ಪೋಸ್ಟ್ ಹಂಚಿಕೊಂಡಿದ್ದು, ಚೀನಾದಲ್ಲಿ ಇನ್‌ಫ್ಲುಯೆನ್ಸಾ ಎ, ಎಚ್‌ಎಂಪಿವಿ, ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್-19 ಸೇರಿದಂತೆ ಅನೇಕ ವೈರಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದ್ದು, ಆಸ್ಪತ್ರೆಗಳು ಮತ್ತು ಸ್ಮಶಾನಗಳು ಭರ್ತಿಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ : ಎಲಿಮಿನೇಷನ್‌ನಲ್ಲಿ ಬಿಗ್​ ಟ್ವಿಸ್ಟ್ – ಈ ವಾರ ಬಿಗ್​ಬಾಸ್‌ ಮನೆಯಿಂದ ಆಚೆ ಬರೋದ್ಯಾರು?

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್ ಸರ್ಕಾರದಿಂದ ಹಗಲು ದರೋಡೆ, ಬಸ್​ ದರ ಏರಿಸಿ ಗ್ಯಾರಂಟಿ ಕೊಟ್ರೆ ಏನ್​ ಪ್ರಯೋಜನ – ಹೆಚ್​​ಡಿಕೆ ಕಿಡಿ..!

ಮೈಸೂರು : ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡ್ತಿದೆ. ಮುದ್ರಾಂಕ, ಪೆಟ್ರೋಲ್​​-ಡೀಸೆಲ್​​​, ನೀರಿನ ದರ, ಹಾಲಿನ ದರ ಏರಿಕೆ ಯಾರಿಗೆ ಎಫೆಕ್ಟ್​. ಬಸ್​ ದರ ಏರಿಸಿ ಗ್ಯಾರಂಟಿ

Live Cricket

Add Your Heading Text Here