ಮುಂಬೈ : ಖ್ಯಾತ ಉದ್ಯಮಿ, ಟಾಟಾ ಸನ್ಸ್ನ ಮುಖ್ಯಸ್ಥ.. ಪದ್ಮವಿಭೂಷಣ ರತನ್ ಟಾಟಾ (86) ಅವರು ನಿಧನ ಹೊಂದಿದ್ದಾರೆ. ಅನಾರೋಗ್ಯ ಹಿನ್ನೆಲೆಯಲ್ಲಿ ಅವರಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸಾಯುವ ಕೊನೆ ಕ್ಷಣದವರೆಗೂ ಸದಾ ಚಟುವಟಿಕೆಯಿಂದಲೇ ಇದ್ದ ರತನ್ ಟಾಟಾ ಅವರ ಬದುಕು ಅನೇಕರಿಗೆ ಸ್ಪೂರ್ತಿಯಾಗಿದೆ. ಅವರು ಮಾಡಿದ ಕೊನೆಯ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚೆಗೆ ಅವರು ಅಸೌಖ್ಯರಾಗಿದ್ದಾರೆ ಎಂಬ ವಿಚಾರ ಎಲ್ಲೆಡೆ ಹಬ್ಬಿತ್ತು. ಈ ವೇಳೆ ಸ್ವತಃ ರತನ್ ಟಾಟಾ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ‘ನನ್ನ ಬಗ್ಗೆ ಯೋಚಿಸಿದ್ದಕ್ಕೆ ಧನ್ಯವಾದಗಳು’ ಎಂದು ಬರೆದ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.
ರತನ್ ಟಾಟಾ ಲಾಸ್ಟ್ ಪೋಸ್ಟ್ ಹೇಳಿದ್ದೇನು? ಇತ್ತೀಚೆಗೆ ನನ್ನ ಆರೋಗ್ಯದ ಬಗ್ಗೆ ಹಬ್ಬಿರುವ ಉಹಾಪೋಹಾದ ಬಗ್ಗೆ ನನಗೆ ಗೊತ್ತಾಗಿದೆ. ಈ ವಿಚಾರಗಳೆಲ್ಲವೂ ಆಧಾರರಹಿತವೆಂದು ನಾನು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ. ನನ್ನ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಂದಾಗಿ ನಾನು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಚಿಂತಿಸುವಂತಹ ಯಾವುದೇ ವಿಚಾರವಿಲ್ಲ. ನಾನು ಉತ್ತಮ ಮನಸ್ಥಿತಿಯಲ್ಲಿದ್ದೇನೆ ಮತ್ತು ಸಾರ್ವಜನಿಕರು ಮತ್ತು ಮಾಧ್ಯಮಗಳು ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕೆಂದು ವಿನಂತಿಸುತ್ತೇನೆ ಎಂದು ರತನ್ ಟಾಟಾ ಟ್ವಿಟ್ ಮಾಡಿದ್ದರು.
ಆಕ್ಟೋಬರ್ 7 ರಂದು ರತನ್ ಟಾಟಾ ಈ ಟ್ವಿಟ್ ಮಾಡಿದ್ದು, ಇದೇ ಅವರ ಜೀವನದ ಕೊನೆ ಟ್ವಿಟ್ಟ ಆಗಿದೆ. ಈ ಟ್ವಿಟ್ ಈಗ ಮತ್ತೆ ವೈರಲ್ ಆಗಿದೆ. ಟಾಟಾ ಅವರ ನಿಧನಕ್ಕೆ ಇಡೀ ದೇಶವೇ ಮರುಗುತ್ತಿದೆ. ಶಿಕ್ಷಣ, ಆರೋಗ್ಯ ರಕ್ಷಣೆ, ನೈರ್ಮಲ್ಯ, ಪ್ರಾಣಿ ಕಲ್ಯಾಣ ಮುಂತಾದ ವಿಷಯಗಳ ಬಗ್ಗೆ ಅವರ ಚಿಂತನೆಗಳು ಅವರ ಕಾರ್ಯಗಳು ಅನೇಕರಿಗೆ ಸ್ಪೂರ್ತಿಯಾಗಿವೆ.
ಇದನ್ನೂ ಓದಿ : ‘ಕ್ರೈಂ ಗಣೇಶ್’ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಗಣೇಶ್ ಇನ್ನಿಲ್ಲ..!