ಬಳ್ಳಾರಿ : ಶಾಸಕ ಭರತ್ ರೆಡ್ಡಿ ಮನೆ ಮತ್ತು ಕಚೇರಿ ಮೇಲೆ ED ನಡೆಸಿದ ದಾಳಿಯ ವೇಳೆ ಹಲವು ಅಕ್ರಮಗಳು ಪತ್ತೆಯಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಸೂರ್ಯ ನಾರಯಣ ರೆಡ್ಡಿ ಹಾಗೂ ಭರತ್ ರೆಡ್ಡಿ ಕಚೇರಿ, ಮನೆಗಳ ಮೇಲೆ ದಾಳಿ ನಡೆದಿದೆ.
ಈ ವೇಳೆ ಜಾರಿ ನಿರ್ದೇಶನಾಲಯ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿದ್ದು, ವಿಧಾನಸಭೆ ಚುನಾವಣೆಗೆ ಮುನ್ನ ಭರತ್ ರೆಡ್ಡಿ ಸಂಗ್ರಹಿಸಿದ 42 ಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ED ತನಿಖೆ ವೇಳೆ ಭರತ್ ರೆಡ್ಡಿಯ ತಮ್ಮ ಶರತ್ ರೆಡ್ಡಿ ಅಕ್ರಮವಾಗಿ ವಿದೇಶದ ಕಂಪನಿಯಲ್ಲಿ ಹೂಡಿಕೆ ಮಾಡಿರುವುದು ಕೂಡ ಪತ್ತೆಯಾಗಿದೆ.
ಆರೋಪಿಗಳು ಬೆನಾಮಿ ಹೆಸರಿನಲ್ಲಿ ಹಲವೆಡೆ ಹೊಡಿಕೆ ಮಾಡಿದ್ದು, ಸಂಬಂಧಿಕರು, ಬ್ಯಾಂಕ್ ಅಕೌಂಟ್ ಮುಖಾಂತರ ಹಣ ವರ್ಗಾವಣೆ ಮಾಡಿದ್ದಾರೆ. ಸಂಬಂಧಿಕರ ಗಮನಕ್ಕೆ ಬಾರದೆ ಅವರ ಅಕೌಂಟ್ನಿಂದ ಕೋಟಿ ಕೋಟಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಕೌಂಟ್ಗಳ ಮೇಲೆ ED ಕಣ್ಣಿನಿಟ್ಟಿತ್ತು.
ಎರಡು ದಿನಗಳ ದಾಳಿ ವೇಳೆ ಹಲವು ದಾಖಲೆ, ವ್ಯವಹಾರಕ್ಕೆ ಸಂಬಂಧಿಸಿದ ರೆಕಾರ್ಡ್ಸ್, ಚರಾಸ್ಥಿ ,ಸಿರಾಸ್ಥಿಗಳೆಲ್ಲಾ ಪತ್ತೆಯಾಗಿದೆ. ED ಭರತ್ ರೆಡ್ಡಿ ಮನೆಯಲ್ಲಿ 31 ಲಕ್ಷ ನಗದು ಜಪ್ತಿ ಮಾಡಿದ್ದು, PMLA 2002 ಅಡಿಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಮುಂದುವರೆಸಿದೆ.
ಇದನ್ನೂ ಓದಿ : ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಅಜಾಗ್ರತ’ ಚಿತ್ರಕ್ಕೆ ನೂರು ದಿನಗಳ ಚಿತ್ರೀಕರಣ ಪೂರ್ಣ..!