Download Our App

Follow us

Home » ಅಪರಾಧ » ಬಳ್ಳಾರಿ ಎಲೆಕ್ಷನ್​​​​​ಗೆ ವಾಲ್ಮೀಕಿ ನಿಗಮದ ಹಣ ಖರ್ಚು ಮಾಡಿದ್ರಾ ಮಾಜಿ ಮಂತ್ರಿ ನಾಗೇಂದ್ರ – ED ರಿಮ್ಯಾಂಡ್​ ಕಾಪಿಯಲ್ಲಿದೆ ಸ್ಫೋಟಕ ಮಾಹಿತಿ..!

ಬಳ್ಳಾರಿ ಎಲೆಕ್ಷನ್​​​​​ಗೆ ವಾಲ್ಮೀಕಿ ನಿಗಮದ ಹಣ ಖರ್ಚು ಮಾಡಿದ್ರಾ ಮಾಜಿ ಮಂತ್ರಿ ನಾಗೇಂದ್ರ – ED ರಿಮ್ಯಾಂಡ್​ ಕಾಪಿಯಲ್ಲಿದೆ ಸ್ಫೋಟಕ ಮಾಹಿತಿ..!

ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಭರ್ಜರಿ ಭೇಟಿಯಾಡಿದೆ. ಹಗರಣದಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿ. ನಾಗೇಂದ್ರನನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ನ್ಯಾಯಾಧೀಶರಾದ ಸಂತೋಷ್​ ಗಜಾನನ ಭಟ್ ಅವರು ನಾಗೇಂದ್ರನನ್ನು 6 ದಿನಗಳ ಕಾಲ ಇಡಿ ಕಸ್ಟಡಿಗೆ ವಹಿಸಿದ್ದಾರೆ.

ಇದೀಗ ಬಿ. ನಾಗೇಂದ್ರ ಬಳ್ಳಾರಿ ಎಲೆಕ್ಷನ್​ಗೆ ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಿರೋ ಅನುಮಾನ ಹುಟ್ಟಿಕೊಂಡಿದೆ. ಇಡಿ ತನಿಖೆಯಲ್ಲಿ 20 ಕೋಟಿ ರಹಸ್ಯ ಬಟಾ ಬಯಲಾಗಿದೆ. ಇಡಿ ವಿಶೇಷ ಕೋರ್ಟ್​ಗೆ ಈ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದು, ವಾಲ್ಮೀಕಿ ನಿಗಮದ 20.19 ಕೋಟಿ ಹಣ ಎಲೆಕ್ಷನ್​ಗೆ ಬಳಕೆ ಮಾಡಿದ್ದಾರೆ. ಚುನಾವಣೆ ವೆಚ್ಚಕ್ಕೆ ನಾಗೇಂದ್ರ ಹಣ ಡೈವರ್ಟ್ ಮಾಡಿದ್ದು, ಲೋಕಸಭೆ ಎಲೆಕ್ಷನ್​​ನಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಹಣ ಹಂಚಿಕೆಯಾಗಿದೆ.

ಈ ಬಗ್ಗೆ ಇಡಿ ರಿಮ್ಯಾಂಡ್​ ಕಾಪಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಇದೇ ಕಾರಣದಿಂದಾಗಿ ನಾಗೇಂದ್ರನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 20.19 ಕೋಟಿ ಹಣ ಎಲ್ಲೆಲ್ಲಿ..? ಹೇಗೆ ಹಂಚಿಕೆ ಮಾಡಲಾಗಿದೆ..? ಯಾರ್ಯಾರ ಅಕೌಂಟ್​ಗಳಿಂದ ಈ ಹಣವನ್ನು ಡ್ರಾ ಮಾಡಲಾಯ್ತು..? ಹೇಗೆಲ್ಲಾ ಹಣವನ್ನು ವೆಚ್ಚ ಮಾಡಲಾಯ್ತು ಅನ್ನೋ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯಾರಿಗೂ ಸಣ್ಣ ಸುಳಿವು ಸಿಗದಂತೆ ED ಅಧಿಕಾರಿಗಳು ಹೆಜ್ಜೆ ಇಡ್ತಿದೆ.

ರಿಮ್ಯಾಂಡ್ ಕಾಪಿಯಲ್ಲಿರುವ ಡಿಟೇಲ್ಸ್ :

  • 187 ಕೋಟಿ ಹಗರಣದ ಮಾಸ್ಟರ್ ಮೈಂಡ್ ನಾಗೇಂದ್ರ..!
  • ಮಾಜಿ ಸಚಿವ ನಾಗೇಂದ್ರಗೆ ಎಲ್ಲವೂ ಗೊತ್ತಿತ್ತು..!
  • ನಾಗೇಂದ್ರ ಆಜ್ಞೆ ಮೇರೆಗೆ 187 ಕೋಟಿ ಹಣ ಲಪಟಾಯಿಸಲಾಗಿದೆ..!
  • ಇಡೀ ಷಡ್ಯಂತ್ರದ ಹಿಂದೆ ನಾಗೇಂದ್ರ ಪಾತ್ರವಿದೆ
  • ವಸಂತನಗರ ಶಾಖೆಯಿಂದ ಎಂಜಿ ರೋಡ್ ಶಾಖೆಗೆ ಅಕೌಂಟ್ ಶಿಫ್ಟ್ ಮಾಡಿಸಿದ್ದೇ ನಾಗೇಂದ್ರ..!
  • ಶಾಂಗ್ರೀಲಾ ಹೊಟೇಲ್ ನಲ್ಲಿ ಸಭೆ ನಡೆಸಿದ್ದ ನಾಗೇಂದ್ರ
  • ಸಭೆಯಲ್ಲಿ ನಿಗಮದ ಮಾಜಿ ಎಂಡಿ ಪದ್ಮನಾಭ ಹಾಗೂ ನಾಗೇಂದ್ರ ಆಪ್ತರು ಭಾಗಿ
  • ಶಾಂಗ್ರೀಲಾ ಹೊಟೇಲ್ ಸಭೆಯಲ್ಲೇ ಸಂಚು ರೂಪಿಸಿದ್ದ ನಾಗೇಂದ್ರ
  • ಸಭೆಯಲ್ಲಿ ನೆಕ್ಕಂಟಿ ನಾಗರಾಜು ಹಾಗೂ ನಾಗೇಶ್ವರ ರಾವ್ ಭಾಗಿ
  • ಹೈದರಾಬಾದ್‌ನ ಆರ್ ಬಿಎಲ್ ಬ್ಯಾಂಕ್ ಬಂಜಾರ ಹಿಲ್ಸ್ ನಲ್ಲಿ 18 ನಕಲಿ ಅಕೌಂಟ್ ಓಪನ್..!11. ಯೂನಿಯನ್ ಬ್ಯಾಂಕ್ ನಿಂದ 18 ಅಕೌಂಟ್ ಗೆ ಕೋಟಿ ಕೋಟಿ ಹಣ ವರ್ಗ
  • ಎಸ್ ಟಿ ಅಭಿವೃದ್ಧಿ ಹಣದ ಫಲಾನುಭವಿಯೇ ನಾಗೇಂದ್ರ ಹಾಗೂ ಆಪ್ತರು..!
  • ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯಿಂದ ಹಗರಣ ಬಹಿರಂಗ..!
  • ಮೇ 23ರಂದೇ ಅಕ್ರಮ ಹಣ ವರ್ಗಾವಣೆಯ ಬಗ್ಗೆ ನಾಗೇಂದ್ರಗೆ ಮಾಹಿತಿ ನೀಡಿದ್ದ ಅಧಿಕಾರಿಗಳು..
  • ಎಲ್ಲ ಹಣವನ್ನು ಹಿಂದಿರುಗಿಸುವ ವ್ಯವಸ್ಥೆ ಮಾಡುವುದಾಗಿ ನಾಗೇಂದ್ರ ಭರವಸೆ
  • ಮೇ 29 ರಂದು ನಾಗೇಂದ್ರ ಕಾರ್ ನಲ್ಲೇ ಮೀಟಿಂಗ್
  • ಏರೋ ಸ್ಪೇಸ್ ಪಾರ್ಕ್ ನಲ್ಲಿ ರಾತ್ರಿ 8ಕ್ಕೆ ಮೀಟಿಂಗ್
  • ನಾಗೇಂದ್ರ , ಮಾಜಿ ಎಂಡಿ ಪದ್ಮನಾಭ , ಆರೋಪಿ ನೆಕ್ಕಂಟಿ ನಾಗರಾಜು ಭಾಗಿ
  • ಯಾರೂ ತನ್ನ ಹೆಸರು ಹೇಳದಂತೆ ನಾಗೇಂದ್ರ ತಾಕೀತು
  • ನನ್ನ ಹೆಸರು ಹೊರಗೆ ಬಂದರೆ ಅಧಿಕಾರ ಹೋಗುತ್ತೆ…
  • ಅಧಿಕಾರದಲ್ಲಿ ಇದ್ದರೆ ಮಾತ್ರ ನಿಮ್ಮ ರಕ್ಷಣೆ ಮಾಡಲು ಸಾಧ್ಯ
  • ನನ್ನ ಹೆಸರು ಹೊರಬರದಂತೆ ನೋಡಿಕೊಳ್ಳುವಂತೆ ತಾಕೀತು
  • ಬಹುಕೋಟಿ ಹಣ ದೋಚಿದ್ದೇ ಮಾಜಿ ಸಚಿವ ನಾಗೇಂದ್ರ
  • ನಾಗೇಂದ್ರ ಹೇಳಿದ್ದಕ್ಕೇ ಅಕೌಂಟ್‌ಗಳನ್ನು ತೆರೆದ ನಿಗಮದ ಸಿಬ್ಬಂದಿ
  • ನಾಗೇಂದ್ರ ಮನೆ ಮೇಲೆ ಇಆ ರೇಡ್ ವೇಳೆ ಹಲವು ಮಹತ್ವದ ದಾಖಲೆ ಪತ್ತೆ

ಇದನ್ನೂ ಓದಿ : ಕಣ್ಮನ ಸೆಳೆಯುತ್ತಿದೆ ‘ಕಡಲೂರ ಕಣ್ಮಣಿ’ ಚಿತ್ರದ ಟ್ರೇಲರ್ : ಜು.19ಕ್ಕೆ ಸಿನಿಮಾ ರಿಲೀಸ್..!

Leave a Comment

DG Ad

RELATED LATEST NEWS

Top Headlines

ನಕಲಿ ನಕ್ಷೆ ಸೃಷ್ಟಿಸಿ ಕಟ್ಟಡ ನಿರ್ಮಾಣ – ಮಾಲೀಕನ ವಿರುದ್ಧ FIR ದಾಖಲು..!

ಬೆಂಗಳೂರು : ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ದುರಂತದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸಿರುವ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜರಾಜೇಶ್ವರಿನಗರ

Live Cricket

Add Your Heading Text Here