ಬೆಂಗಳೂರು : ಕನ್ನಡ ಮಾತಾಡು ಎಂದು ಕ್ಯಾಶಿಯರ್ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ನಡೆದಿದೆ. ಅಂಗಡಿಯಲ್ಲಿ ಕುಡುಕ ತನಗೆ ಬೇಕಾಗಿದ್ದನ್ನ ತೆಗೆದುಕೊಂಡು ಅನಂತರ ಹಣ ಕೊಟ್ಟಿಲ್ಲ, ಹಾಗಾಗಿ ಹಣ ಕೊಡುವಂತೆ ಕೇಳಿದಾಗ ಕನ್ನಡದಲ್ಲಿ ಮಾತಾಡು ಎಂದು ಅವಾಜ್ ಹಾಕಿದ್ದಾನೆ.
ಬಿಲ್ ಕೊಡುವಂತೆ ಕೇಳಿದಾಗ ಕುಡುಕ ಕಿರಿಕ್ ಮಾಡಿ ಹಲ್ಲೆ ನಡೆಸಿದ್ದಾನೆ. ಕನ್ನಡ ಕಲಿಬೇಕು ಎಂದು ಆರೋಪಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಾಮಮೂರ್ತಿನಗರ ಠಾಣೆಯ ಇನ್ಸ್ಪೆಕ್ಟರ್ ಮುತ್ತುರಾಜ್ ವಿರುದ್ಧ ಕಿರುಕುಳ ಆರೋಪ – PSI, ಸಿಬ್ಬಂದಿಗಳಿಂದ ಗೃಹಸಚಿವರಿಗೆ ಪತ್ರ..!
Post Views: 121