Download Our App

Follow us

Home » ರಾಜ್ಯ » ಮನೆ ಖಾಲಿ ಮಾಡಿಸಲು ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ.. ವೃದ್ಧ ದಂಪತಿಗಳಿಗೆ ಮನೆಯ ಮಾಲೀಕನಿಂದಲೇ ಚಿತ್ರಹಿಂಸೆ..!

ಮನೆ ಖಾಲಿ ಮಾಡಿಸಲು ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ.. ವೃದ್ಧ ದಂಪತಿಗಳಿಗೆ ಮನೆಯ ಮಾಲೀಕನಿಂದಲೇ ಚಿತ್ರಹಿಂಸೆ..!

ಬೆಂಗಳೂರು : ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರಲ್ಲಿ ಲೀಸ್‌ಗೆ ಇದ್ದ ವೃದ್ಧ ದಂಪತಿಯನ್ನು ಮನೆಯಿಂದ ಖಾಲಿ ಮಾಡಿಸಲು ಮನೆಯ ಕುಡಿಯುವ ನೀರಿನ ಸಂಪರ್ಕ ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಮನೆ ಮಾಲೀಕನೇ ಪೈಶಾಚಿಕ ವರ್ತನೆ ತೋರಿಸಿರುವ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

 

ಬೆಂಗಳೂರಿನ ಹೊರ ವಲಯ ನೆಲಮಂಗಲದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದ್ದು, ಮನೆ ಖಾಲಿ ಮಾಡಿಸಲು ಕುಡಿಯುವ ನೀರು, ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಮನೆಯ ಮಾಲೀಕರು ವೃದ್ಧ ದಂಪತಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ.

ಸರ್ಕಾರದಿಂದ ಉಚಿತ ವಿದ್ಯುತ್ ನಿಯಮ ಇದ್ರು ಮನೆಯ ಮೀಟರ್ ಬಳಿ ಪವರ್ ಕಟ್ ಮಾಡಿ ಪೈಶಾಚಿಕವಾಗಿ ವರ್ತಿಸುತ್ತಿದ್ದಾರೆ. ಮನೆಗೆ ಕುಡಿಯುವ ನೀರಿಲ್ಲ, ಅಡುಗೆ ಮಾಡಲು ನೀರಿಲ್ಲ, ಶೌಚಾಲಯಕ್ಕೂ ಹೊರಗಡೆಯಿಂದ ನೀರು ತಂದು ಜೀವನ ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಸುಮಾರು 40 ಮನೆ ಇರುವ ಅಪಾರ್ಟ್ಮೆಂಟ್ ನಲ್ಲಿ ಜನರು ಮಾನವೀಯತೆ ಮರೆತಿದ್ದಾರೆ. ಕಳೆದ 10 ದಿನಗಳ ಹಿಂದೆ ಮನೆಯ ನೀರು ಕಡಿತಗೊಳಿಸಲಾಗಿದೆ. ಈಗ ಕಳೆದ 4 ದಿನದ ಹಿಂದೆ ವಿದ್ಯತ್ ಸಂಪರ್ಕವನ್ನೂ ಕಡಿಮೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ವೃದ್ಧ ದಂಪತಿಗಳು  ನಾಲ್ಕು ದಿನದಿಂದ ಕತ್ತಲ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಈ ವಿಚಾರದಲ್ಲಿ ನೆಲಮಂಗಲ ಟೌನ್ ಪೊಲೀಸರಿಗೆ, ಬೆಸ್ಕಾಂಗೆ ದೂರು ಕೊಟ್ರು ಯಾವುದೇ ಪ್ರಯೋಜನ ಇಲ್ಲ. ಆಧುನಿಕ ಕಾಲದಲ್ಲಿ ಸುಸಜ್ಜಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರೂ ಅವರನ್ನು ವಂಚನೆ ಮಾಡಿ ಮನೆಯಿಂದ ಹೊರದೂಡಲು ಇನ್ನಿಲ್ಲದ ಕಿರುಕುಳವನ್ನು ನೀಡಲಾಗುತ್ತಿದೆ.

ಬಲಿಷ್ಠರನ್ನು ಎದುರು ಹಾಕಿಕೊಂಡು ಅವರಿಂದ ಹಣ ಪಡೆಯಲಾಗದೇ ವೃದ್ಧ ದಂಪತಿ ದಿನನಿತ್ಯ ಮೂಲ ಸೌಕರ್ಯವಿಲ್ಲದ ಮನೆಯಲ್ಲಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.

ಇದನ್ನೂ ಓದಿ : ಬೆಂಗಳೂರು : ಐಷಾರಾಮಿ ಅಪಾರ್ಟ್ಮೆಂಟ್​ಗಳಿಗೆ ನುಗ್ಗಿ ಶೂ ಕಳ್ಳತನ.. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here