ಮಡಿಕೇರಿ : ಯುವಕನೋರ್ವ ಎನರ್ಜಿ ಡ್ರಿಂಕ್ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಯವಕ ವಿನೋದ್ ಎಂಬಾತ ನಗರದ ಅಂಗಡಿಯೊಂದರಲ್ಲಿ ರೆಡ್ ಬುಲ್ ಎನರ್ಜಿ ಡ್ರಿಂಕ್ ಖರೀದಿಸಿ ಅದನ್ನು ಕುಡಿದ ಬಳಿಕ ಅಸ್ವಸ್ಥನಾಗಿದ್ದಾನೆ.
ತಕ್ಷಣವೇ ಆತನನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ರೆಡ್ ಬುಲ್ ಎನರ್ಜಿ ಡ್ರಿಂಕ್ ಟೀನ್ ನೋಡಿದಾಗ ಅದರಲ್ಲಿ ಲೋಳೆಯಂತ ವಸ್ತು ಪತ್ತೆಯಾಗಿದೆ. ನಂತರ ಆತ ಕುಡಿದ ಎನರ್ಜಿ ಡ್ರಿಂಕ್ ಟಿನ್ ನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ಈ ಬಗ್ಗೆ ಮಡಿಕೇರಿ ಟೌನ್ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಯೋಗಾಲಯದ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ರಾಗಿಣಿ ದ್ವಿವೇದಿ ಅಭಿನಯದ ‘ಇಮೇಲ್’ ಚಿತ್ರದ ಟ್ರೇಲರ್, ಸಾಂಗ್ಸ್ ರಿಲೀಸ್..!
Post Views: 670