ಬೆಂಗಳೂರು : ನಗರದ ಹೊರವಲಯದ ಸಿಂಗಹಳ್ಳಿ ಶೆಡ್‌ನಲ್ಲಿ ಖಾಸಗಿ ಬಸ್‌ನ ಇಬ್ಬರು ಸಿಬ್ಬಂದಿ ಕೊಲೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಗಳನ್ನುರಾಮನಗರ ಮೂಲದ ನಾಗೇಶ್ (50) ಮತ್ತು ಮಂಡ್ಯ ಮೂಲದ ಮಂಜುನಾಥ್ (55) ಎಂದು ಗುರುತಿಸಲಾಗಿದ್ದು, ಈ ಇಬ್ಬರು ಖಾಸಗಿ ಬಸ್‌ನ ಕ್ಲೀನರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ರಾತ್ರಿ ಕುಡಿದ ಅಮಲಿನಲ್ಲಿ ಇಬ್ಬರು ಹೊಡೆದಾಡಿಕೊಂಡ ಪರಿಣಾಮ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗನಹಳ್ಳಿ ಎಸ್.ಆರ್.ಎಸ್ ಟ್ರಾವೆಲ್ಸ್ ಪಾರ್ಕಿಂಗ್ ಸ್ಥಳದ ಶೆಡ್‌ನಲ್ಲಿ ಒಟ್ಟಿಗೆ ಡಬಲ್ ಮರ್ಡರ್‌ಗಳಾಗಿವೆ. ಆದರೆ ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಕೋವಿಡ್ ಹಗರಣ : ಮಾಜಿ ಸಿಎಂ ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ಗೆ ಶಿಫಾರಸ್ಸು..!
Post Views: 759