ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ಗೆ ಅಗ್ನಿ ಪರೀಕ್ಷೆಯ ಕಾಲ ಶುರುವಾಗಿದೆ. ಜೈಲಿನಲ್ಲಿ ಇರಲು ಆಗದೇ ಪರದಾಡುತ್ತಿದ್ದ ದಾಸ ಸದ್ಯಕ್ಕೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊನ್ನೆಯಷ್ಟೇ ನಟ ದರ್ಶನ್ಗೆ ವೈದ್ಯರು ಟೆಸ್ಟ್ಗಳನ್ನು ಮಾಡಿ ಅವರ ಆರೋಗ್ಯದಲ್ಲಿ ಏನೆಲ್ಲಾ ಆಗ್ತಿದೆ ಅಂತ ಪರೀಕ್ಷಿಸಿದ್ದಾರೆ.
ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ನ ಹಿರಿಯ ನರ ರೋಗ ತಜ್ಞ ಡಾ.ನವೀನ್ ಹಾಗೂ ತಂಡ ಎಕ್ಸಾಮಿನೇಷನ್ ಮಾಡಿದೆ. ಬೆನ್ನು ನೋವು ಹಿನ್ನಲೆ ದರ್ಶನ್ಗೆ ಎಕ್ಸ್ರೇ, MRI ಸ್ಕ್ಯಾನ್ ಸೇರಿದಂತೆ ಹಲವು ರೀತಿಯ ಟೆಸ್ಟ್ಗಳನ್ನ ಮಾಡಲಾಗಿದೆ. ಹೈಕೋರ್ಟ್ 1 ವಾರದಲ್ಲಿ ಮೆಡಿಕಲ್ ರಿಪೋರ್ಟ್ ಸಲ್ಲಿಸಲು ಸೂಚಿಸಿತ್ತು. ಅದರಂತೆ ನಿನ್ನೆ ದರ್ಶನ್ ಅವರ ಹೆಲ್ತ್ ರಿಪೋರ್ಟ್ ಅನ್ನು ಹೈಕೋರ್ಟ್ ಫೈಲಿಂಗ್ ಕೌಂಟರ್ಗೆ ದರ್ಶನ್ ಪರ ವಕೀಲರು ಸಲ್ಲಿಕೆ ಮಾಡಿದ್ದಾರೆ.
ಇನ್ನು ಮೆಡಿಕಲ್ ರಿಪೋರ್ಟ್ ಪ್ರಕಾರ ದರ್ಶನ್ಗೆ ಎರಡು ದಿನದಲ್ಲಿ ಸರ್ಜರಿ ಮಾಡಲೇಬೇಕೆಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಟೆಸ್ಟಿಂಗ್ ವೇಳೆ ನಟ ದರ್ಶನ್ಗೆ ಬೆನ್ನು ನೋವು ಸಮಸ್ಯೆ ತೀವ್ರವಾಗಿರುವುದು ಪತ್ತೆಯಾಗಿದೆ. ಹೀಗಾಗಿ ಸರ್ಜರಿ ಮಾಡೋದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಈಗಾಗಲೇ ದರ್ಶನ್ ಹಾಗೂ ಅವರ ಮನೆಯವರ ಜೊತೆ ವೈದ್ಯರ ಟೀಂ ಮಾತನಾಡಿದ್ದು, ದರ್ಶನ್ ಸರ್ಜರಿಗೆ ಪತ್ನಿ ವಿಜಯಲಕ್ಷ್ಮಿ ಸಮ್ಮತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಕುಟುಂಬದವರ ಅನುಮತಿಯಂತೆ ವೈದ್ಯರು ಸರ್ಜರಿ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ : ಇಂದು ಪವಿತ್ರಾ ಗೌಡ ಸೇರಿ ನಾಲ್ವರ ಬೇಲ್ ಅರ್ಜಿ ವಿಚಾರಣೆ..!