Download Our App

Follow us

Home » ಸಿನಿಮಾ » ದರ್ಶನ್​ಗೆ ಸರ್ಜರಿ​ ಮಾಡಲೇಬೇಕೆಂದ ವೈದ್ಯರು.. ಹೈಕೋರ್ಟ್​ಗೆ ಸಲ್ಲಿಸಿದ ಹೆಲ್ತ್ ರಿಪೋರ್ಟ್​ನಲ್ಲಿ ಏನಿದೆ?

ದರ್ಶನ್​ಗೆ ಸರ್ಜರಿ​ ಮಾಡಲೇಬೇಕೆಂದ ವೈದ್ಯರು.. ಹೈಕೋರ್ಟ್​ಗೆ ಸಲ್ಲಿಸಿದ ಹೆಲ್ತ್ ರಿಪೋರ್ಟ್​ನಲ್ಲಿ ಏನಿದೆ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ಗೆ ಅಗ್ನಿ ಪರೀಕ್ಷೆಯ ಕಾಲ ಶುರುವಾಗಿದೆ. ಜೈಲಿನಲ್ಲಿ ಇರಲು ಆಗದೇ ಪರದಾಡುತ್ತಿದ್ದ ದಾಸ ಸದ್ಯಕ್ಕೆ ಆಸ್ಪತ್ರೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮೊನ್ನೆಯಷ್ಟೇ ನಟ ದರ್ಶನ್​ಗೆ ವೈದ್ಯರು ಟೆಸ್ಟ್​ಗಳನ್ನು ಮಾಡಿ ಅವರ ಆರೋಗ್ಯದಲ್ಲಿ ಏನೆಲ್ಲಾ ಆಗ್ತಿದೆ ಅಂತ ಪರೀಕ್ಷಿಸಿದ್ದಾರೆ.

ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿರುವ ದರ್ಶನ್​ನ ಹಿರಿಯ ನರ ರೋಗ ತಜ್ಞ ಡಾ.ನವೀನ್ ಹಾಗೂ ತಂಡ ಎಕ್ಸಾಮಿನೇಷನ್ ಮಾಡಿದೆ. ಬೆನ್ನು ನೋವು ಹಿನ್ನಲೆ ದರ್ಶನ್​ಗೆ ಎಕ್ಸ್​ರೇ, MRI ಸ್ಕ್ಯಾನ್ ಸೇರಿದಂತೆ ಹಲವು ರೀತಿಯ ಟೆಸ್ಟ್​ಗಳನ್ನ ಮಾಡಲಾಗಿದೆ. ಹೈಕೋರ್ಟ್ 1 ವಾರದಲ್ಲಿ ಮೆಡಿಕಲ್ ರಿಪೋರ್ಟ್ ಸಲ್ಲಿಸಲು ಸೂಚಿಸಿತ್ತು. ಅದರಂತೆ ನಿನ್ನೆ ದರ್ಶನ್​ ಅವರ ಹೆಲ್ತ್ ರಿಪೋರ್ಟ್​ ಅನ್ನು ಹೈಕೋರ್ಟ್ ಫೈಲಿಂಗ್ ಕೌಂಟರ್​ಗೆ ದರ್ಶನ್ ಪರ ವಕೀಲರು ಸಲ್ಲಿಕೆ ಮಾಡಿದ್ದಾರೆ.

ಇನ್ನು ಮೆಡಿಕಲ್ ರಿಪೋರ್ಟ್ ಪ್ರಕಾರ ದರ್ಶನ್​ಗೆ ಎರಡು ದಿನದಲ್ಲಿ ಸರ್ಜರಿ​ ಮಾಡಲೇಬೇಕೆಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಟೆಸ್ಟಿಂಗ್ ವೇಳೆ ನಟ ದರ್ಶನ್​ಗೆ ಬೆನ್ನು ನೋವು ಸಮಸ್ಯೆ ತೀವ್ರವಾಗಿರುವುದು ಪತ್ತೆಯಾಗಿದೆ. ಹೀಗಾಗಿ ಸರ್ಜರಿ ಮಾಡೋದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಈಗಾಗಲೇ ದರ್ಶನ್​ ಹಾಗೂ ಅವರ ಮನೆಯವರ ಜೊತೆ ವೈದ್ಯರ ಟೀಂ ಮಾತನಾಡಿದ್ದು, ದರ್ಶನ್​ ಸರ್ಜರಿಗೆ ಪತ್ನಿ ವಿಜಯಲಕ್ಷ್ಮಿ ಸಮ್ಮತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಕುಟುಂಬದವರ ಅನುಮತಿಯಂತೆ ವೈದ್ಯರು ಸರ್ಜರಿ‌ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್​ : ಇಂದು ಪವಿತ್ರಾ ಗೌಡ ಸೇರಿ ನಾಲ್ವರ ಬೇಲ್​ ಅರ್ಜಿ ವಿಚಾರಣೆ..!

Leave a Comment

DG Ad

RELATED LATEST NEWS

Top Headlines

ಕೇರಳದಲ್ಲಿ ಭೀಕರ ಅಪಘಾತ.. ಐವರು MBBS ವಿದ್ಯಾರ್ಥಿಗಳ ದುರ್ಮರಣ..!

ಕೇರಳ : ಕೇರಳದ ಅಲಪ್ಪುಳದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ದೇವಾನಂದನ್, ಮುಹಮ್ಮದ್ ಇಬ್ರಾಹಿಂ, ಆಯುಷ್ ಶಾಜಿ,

Live Cricket

Add Your Heading Text Here