ಮಂಡ್ಯ : ಮಳೆಯ ಅಬ್ಬರದಿಂದ ಮುಂಗಾರು ಆರಂಭದಲ್ಲೇ ಕೆಆರ್ಎಸ್ ಡ್ಯಾಂ ತುಂಬಿ ತುಳುಕುತ್ತಿದೆ. ಭರ್ತಿಯಾದ KRSಗೆ ಡಿಸಿಎಂ, ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದಾರೆ.
124 ಅಡಿ ಸಾಮರ್ಥ್ಯದ ಡ್ಯಾಂ ನೀರು 123 ಅಡಿಗೆ ತಲುಪಿದೆ. ಡಿಸಿಎಂ ಡಿಕೆಶಿ KRSಗೆ ಭೇಟಿ ನೀಡಿ ಡ್ಯಾಂ ಮೇಲೆ ಸಂಚರಿಸಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಂಡ್ಯ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಕದಲೂರು ಉದಯ್, ದಿನೇಶ್ ಗೂಳಿಗೌಡ ಸಾಥ್ ನೀಡಿದ್ದಾರೆ.
ಡ್ಯಾಂನ ಒಳಹರಿವು, ಹೊರ ಹರಿವಿನ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದಾರೆ. ನದಿಗೆ ಎಷ್ಟು ಪ್ರಮಾಣದ ನೀರು ಹರಿಸಲಾಗುತ್ತಿದೆ, ಯಾವ-ಯಾವ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಬಹುದು ಈ ಎಲ್ಲಾ ಮಾಹಿತಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಜುಲೈ 27ರಂದು KRSಗೆ ಬಾಗಿನ ಅರ್ಪಿಸಲಿದ್ದಾರೆ. KRS ಡ್ಯಾಂಗೆ 60,016 ಕ್ಯೂಸೆಕ್ ನೀರು ಹರಿದು ಬರ್ತಿದ್ದು, 52,020 ಕ್ಯೂಸೆಕ್ ನೀರು ಡ್ಯಾಂನಿಂದ ಹೊರಕ್ಕೆ ಹರಿದು ಹೋಗ್ತಿದೆ. ಹೀಗಾಗಿ ಶ್ರೀರಂಗಪಟ್ಟಣ ಸೇರಿದಂತೆ ಹಲವು ಭಾಗಗಳಿಗೆ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ : ಇಂದು ಸೂರಜ್ ರೇವಣ್ಣ ಜಾಮೀನು ಆದೇಶ ಪ್ರಕಟಿಸಲಿರೋ ಕೋರ್ಟ್..!