Download Our App

Follow us

Home » ರಾಜಕೀಯ » ಪ್ರಧಾನಿ ಮೋದಿ ಪಟ್ಟಾಭಿಷೇಕಕ್ಕೆ ಸಾಕ್ಷಿಯಾದ ಗಣ್ಯಾತಿ ಗಣ್ಯರು – ಯಾರೆಲ್ಲಾ ಬಂದಿದ್ರು ಗೊತ್ತಾ..?

ಪ್ರಧಾನಿ ಮೋದಿ ಪಟ್ಟಾಭಿಷೇಕಕ್ಕೆ ಸಾಕ್ಷಿಯಾದ ಗಣ್ಯಾತಿ ಗಣ್ಯರು – ಯಾರೆಲ್ಲಾ ಬಂದಿದ್ರು ಗೊತ್ತಾ..?

ಸತತ ಮೂರನೇ ಬಾರಿ ಪ್ರಧಾನಿ ಪಟ್ಟಕ್ಕೇರುತ್ತಿರುವ ನರೇಂದ್ರ ಮೋದಿ ಪಟ್ಟಾಭಿಷೇಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ರಾಷ್ಟ್ರರಾಜಧಾನಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ಮೋದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಸಂಭ್ರಮ ಮೇಳೈಸಿತ್ತು. ನಮೋ ಐತಿಹಾಸಿಕ ಪದಗ್ರಹಣಕ್ಕೆ ದೇಶ-ವಿದೇಶದ ಗಣ್ಯರೆಲ್ಲಾ ಭಾಗಿಯಾಗಿದರು. 7 ದೇಶದ ನಾಯಕರು ಸೇರಿದಂತೆ ಭಾರತದ ಪ್ರಭಾವಿ ಉದ್ಯಮಿಗಳು, ಬಾಲಿವುಡ್​​ ಸ್ಟಾರ್​ಗಳು, ಸೌತ್​ ಸಿನಿರಂಗದ ಸೂಪರ್​ ಸ್ಟಾರ್​​ಗಳು, ಮಾಜಿ ಕ್ರಿಕೆಟಿಗರು, ಧಾರ್ಮಿಕ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು ಸೇರಿದಂತೆ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಗಣ್ಯರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗಣ್ಯಾತಿ ಗಣ್ಯರು ಭಾಗಿ :

ಬಾಂಗ್ಲಾದೇಶದ ಪ್ರಧಾನಿ ಶೇಖ್​​ ಹಸೀನಾ, ಶ್ರೀಲಂಕಾ ಅಧ್ಯಕ್ಷ ವಿಕ್ರಂಸಿಂಘ್, ಮಾಲ್ಡೀವ್ಸ್​​​​ನ ಪ್ರಧಾನಿ ಮೊಹಮ್ಮದ್​​ ಮಜೀಜು, ಭೂತಾನ್ ಪ್ರಧಾನಿ ಟೊಬ್ಗೇ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​, ಜನಸೇನಾ ಪಕ್ಷದ ನೇತಾರ ಪವನ್​ ಕಲ್ಯಾಣ್​, ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಪರ್​ ರಜನಿಕಾಂತ್​, ಬಾಲಿವುಡ್​ ಕಿಂಗ್​​​​ ಶಾರುಖ್​​ ಖಾನ್​, ಕಿಲಾಡಿ ಅಕ್ಷಯ್​ ಕುಮಾರ್​, ಅನುಪಮ್​​ ಖೇರ್​, ಉದ್ಯಮಿಗಳಾದ ಮುಖೇಶ್​ ಅಂಬಾನಿ, ಗೌತಮ್​ ಅದಾನಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ.

ಇದನ್ನೂ ಓದಿ : ದೇಶ ಮತ್ತು ಕರ್ನಾಟಕದ ಏಳಿಗೆಗಾಗಿ ನಾವೆಲ್ಲಾ ಕೆಲಸ ಮಾಡ್ತೇವೆ – ಸಚಿವ ಸ್ಥಾನ ಕನ್ಫರ್ಮ್​ ಆಗ್ತಿದ್ದಂತೆ ವಿ.ಸೋಮಣ್ಣ ರಿಯಾಕ್ಷನ್​​..!

Leave a Comment

DG Ad

RELATED LATEST NEWS

Top Headlines

ಅಟ್ರಾಸಿಟಿ ಕೇಸ್​​ ಇದ್ರೂ ಅರೆಸ್ಟ್ ಆಗಿಲ್ಲ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್ – FIR ಆಗಿದ್ರೂ ಸಸ್ಪೆಂಡ್‌ ಮಾಡದೆ ರಕ್ಷಣೆ ಮಾಡ್ತಿರೋದ್ಯಾಕೆ?

ಆನೇಕಲ್​​ : ಭೂ ವಿವಾದಕ್ಕೆ ಸಂಬಂಧಿಸಿದಂತೆ ಟೌನ್​ ಪ್ಲಾನಿಂಗ್​ ಆಫೀಸರ್ ಮಂಜೇಶ್​​​ ಜೆಸಿಬಿಯನ್ನೂ ತೆಗೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದ್ದ ಘಟನೆಯೊಂದು ನಡೆದಿತ್ತು. ಈ ಪ್ರಕರಣಕ್ಕೆ ಮಂಜೇಶ್​​​ ವಿರುದ್ದ

Live Cricket

Add Your Heading Text Here