Download Our App

Follow us

Home » ರಾಷ್ಟ್ರೀಯ » ಡಿಜಿಟಲ್​ ಅರೆಸ್ಟ್​ ಬಗ್ಗೆ ಜಾಗ್ರತೆ ವಹಿಸುವಂತೆ ಪ್ರಧಾನಿ ಮೋದಿ ವಾರ್ನಿಂಗ್..!

ಡಿಜಿಟಲ್​ ಅರೆಸ್ಟ್​ ಬಗ್ಗೆ ಜಾಗ್ರತೆ ವಹಿಸುವಂತೆ ಪ್ರಧಾನಿ ಮೋದಿ ವಾರ್ನಿಂಗ್..!

ನವದೆಹಲಿ : ಸೈಬರ್ ವಂಚನೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳು ಕರ್ನಾಟಕದಲ್ಲಿಯೂ ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ತಮ್ಮ 115ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ.

ಕಾನೂನಿನಲ್ಲಿ ಡಿಜಿಟಲ್ ಅರೆಸ್ಟ್ ಅನ್ನೋ ವ್ಯವಸ್ಥೆಯೇ ಇಲ್ಲ. ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎನ್ನುವುದು ಬರೀ ಸುಳ್ಳು. ಕ್ರಿಮಿನಲ್ ಗ್ಯಾಂಗ್​ಗಳು, ವಂಚಕರು ಮಾಡುವ ಕೆಲಸವದು ಎಂದು ನರೇಂದ್ರ ಮೋದಿ ಹೇಳಿದರು.

ಫೋನ್​ ಮಾಡಿ, ವಿಡಿಯೋ ಕಾಲ್​ ಮಾಡಿ ವಿಚಾರಣೆ ನಡೆಸಲ್ಲ, ಡಿಜಿಟಲ್​ ಅರೆಸ್ಟ್​ನಿಂದ ಪಾರಾಗಲು ಮೂರು ಪ್ಲಾನ್​ ಇದೆ ಎಂದು ಪ್ರಧಾನಿ ಕನ್ನಡಿಗ ಸಂತೋಷ್​ ಪಾಟೀಲ್​​ ಉದಾಹರಣೆ ಕೊಟ್ಟಿದ್ದಾರೆ.

ಆನ್ಲೈನ್ ಫ್ರಾಡ್ ಹೇಗಿರುತ್ತದೆ ಎನ್ನುವ ನಿದರ್ಶನಗಳನ್ನೂ ಅವರು ನೀಡಿದರು. ಪೊಲೀಸ್, ಸಿಬಿಐ, ನಾರ್ಕೋಟಿಕ್ಸ್, ಆರ್​ಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಫೋನ್ ಮಾಡಬಹುದು. ನಿಮ್ಮ ಮಗಳು ದಿಲ್ಲಿಯಲ್ಲಿ ಓದುತ್ತಿದ್ದಾರೆ ಅಲ್ವಾ? ಇತ್ಯಾದಿ ನಿಮ್ಮ ವೈಯಕ್ತಿಕ ಜೀವನದ ಮಾಹಿತಿಯನ್ನು ಅವರು ಪತ್ತೆ ಮಾಡುತ್ತಾರೆ. ನಿಮ್ಮ ಮೇಲೆ ಕೇಸ್ ದಾಖಲಿಸಲಾಗುತ್ತಿದೆ ಇತ್ಯಾದಿ ಬೆದರಿಕೆ ಹಾಕಬಹುದು ಎಂದು ಅವರು ಉದಾಹರಣೆ ನೀಡಿದರು.

ಇದನ್ನೂ ಓದಿ : ಹೈಕೋರ್ಟ್‌ನಲ್ಲಿ ಇಂದು ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ..!

Leave a Comment

DG Ad

RELATED LATEST NEWS

Top Headlines

ಜೈ ಹನುಮಾನ್ ಚಿತ್ರದ ಫಸ್ಟ್ ಲುಕ್ ರಿಲೀಸ್ – ಆಂಜನೇಯನಾದ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ..!

ರಾಷ್ಟ್ರ ಪ್ರಶಸ್ತಿ ವಿಜೇತ, ಕನ್ನಡ ಸ್ಟಾರ್ ನಟ ರಿಷಬ್ ಶೆಟ್ಟಿ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ಹನುಮಾನ್ ನಂತರ ಬಹುನಿರೀಕ್ಷಿತ ಸೀಕ್ವೆಲ್

Live Cricket

Add Your Heading Text Here