ತಿರುಪತಿಯ ತಿಮ್ಮಪ್ಪನ ಪವಿತ್ರ ಪ್ರಸಾದವಾದ ಲಡ್ಡುವಿನಲ್ಲಿ ದನದ ಕೊಬ್ಬು ಬಳಕೆ ವಿಚಾರ ದೇಶದಲ್ಲಿಯೇ ಕೋಲಾಹಲ ಎಬ್ಬಿಸಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿತರಣೆಯಾಗುತ್ತಿರುವ ಪ್ರಸಾದದ ಸ್ವಚ್ಛತೆ ಬಗ್ಗೆ ಸ್ಥಳೀಯ ಸರ್ಕಾರ ಹಾಗೂ ದೇವಾಲಯದ ಆಡಳಿತ ಮಂಡಳಿಗಳು ಜಾಗೃತೆಯಾಗಿವೆ.
ಇದೀಗ ಪಳನಿ ದೇವಸ್ಥಾನದ ಪವಿತ್ರ ಪಂಚಾಮೃತಂ ಕುರಿತು ಹೇಳಿಕೆ ನೀಡಿದ್ದ ತಮಿಳು ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಅವರನ್ನು ತಿರುಚಿ ಪೊಲೀಸರು ಬಂಧಿಸಿದ್ದಾರೆ. ‘ಬಕಾಸುರನ್’, ‘ದ್ರೌಪದಿ’ ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿ ಚರ್ಚೆಯಲ್ಲಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಬಂಧನದ ಬೆನ್ನಲ್ಲೇ ಪಳನಿ ದೇವಾಲಯದ ಪ್ರಸಾದವನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ನಿರ್ದೇಶಕ ಮೋಹನ್ ಹೇಳಿದ್ದೇನು? ನಿರ್ದೇಶಕ ಮೋಹನ್ ಅವರು ಪಳನಿ ದೇವಸ್ಥಾನದಲ್ಲಿ ಭಕ್ತರಿಗೆ ನೀಡಲಾಗುವ ಪಂಚಾಮೃತದಲ್ಲಿ ದುರ್ಬಲ ಮಾತ್ರೆ ಬಳಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿ ಅವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆ ನಿರ್ದೇಶಕನನ್ನು ಅರೆಸ್ಟ್ ಮಾಡಲಾಗಿದೆ. ತಿರುಪತಿ ಲಡ್ಡುವಿನಲ್ಲಿ ದನ, ಹಂದಿ ಮತ್ತು ಮೀನಿನ ಎಣ್ಣೆ ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆ ಡೈರೆಕ್ಟರ್ ಕೊಟ್ಟ ಈ ಹೇಳಿಕೆಯು ವೈರಲ್ ಆಗಿದೆ. ಹೇಳಿಕೆ ಆಧರಿಸಿ ತಿರುಚಿ ಪೊಲೀಸರು ಮೋಹನ್ ಅವರನ್ನು ಚೆನ್ನೈನಲ್ಲಿ ಬಂಧಿಸಿ ತಿರುಚಿಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ : ಧಾರವಾಡ : ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿ – ಇಬ್ಬರ ಸ್ಥಿತಿ ಚಿಂತಾಜನಕ..!