ಧಾರವಾಡ : ತಾಲೂಕಿನ ಮುಲ್ಲಾ ಡಾಬಾದ ಬಳಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 12ಕ್ಕೂ ಹೆಚ್ಚು ಯುವಕರು ಗಾಯಗೊಂಡಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಜ್ಜುಗುಜ್ಜಾದ ಟಿಟಿಯಲ್ಲೇ ಸುಮಾರು ಹೊತ್ತಿನವರೆಗೆ 12 ಯುವಕರು ಸಿಲುಕಿದ್ದರು. ಬಳಿಕ ಸ್ಥಳೀಯರು ಟಿಟಿಯಲ್ಲಿ ಸಿಲುಕಿದ್ದ ಯವಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆಯಿಂದ ಬೆಳಗಾವಿಯತ್ತ ಟಿಟಿ ವಾಹನ ಹೊರಟಿತ್ತು. ಮಾಹಿತಿ ಪ್ರಕಾರ 12 ಮಂದಿ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ : ಬೆಂಗಳೂರು : 62 ಅಬಕಾರಿ ಕಚೇರಿಗಳ ಮೇಲೆ ಲೋಕಾ ದಾಳಿ – ರೇಡ್ ವೇಳೆ ಸಿಗ್ತು ಎಣ್ಣೆ ಬಾಟಲಿ, ಗಾಂಜಾ, ಲಕ್ಷ-ಲಕ್ಷ ಹಣ..!
Post Views: 166