Download Our App

Follow us

Home » ರಾಜ್ಯ » ರಾಜ್ಯದಲ್ಲಿ ನಿಲ್ಲುತ್ತಿಲ್ಲ ಡೆಂಘೀ ಆರ್ಭಟ – ಕಳೆದ 24 ಗಂಟೆಯಲ್ಲಿ 435 ಕೇಸ್ ಪತ್ತೆ, 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ..!

ರಾಜ್ಯದಲ್ಲಿ ನಿಲ್ಲುತ್ತಿಲ್ಲ ಡೆಂಘೀ ಆರ್ಭಟ – ಕಳೆದ 24 ಗಂಟೆಯಲ್ಲಿ 435 ಕೇಸ್ ಪತ್ತೆ, 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ..!

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಕೇಸ್​ಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆ ಅವಧಿಯಲ್ಲಿ 435 ಡೆಂಘೀ ಕೇಸ್​ಗಳು ವರದಿಯಾಗಿವೆ. ರಾಜಧಾನಿ ಬೆಂಗಳೂರು BBMP ವ್ಯಾಪ್ತಿಯಲ್ಲಿ 24 ಗಂಟೆಯಲ್ಲಿ 363 ಡೆಂಘೀ ಕೇಸ್ ಪತ್ತೆಯಾಗಿವೆ.

ರಾಜ್ಯದಲ್ಲಿ ಒಟ್ಟು 65 ಡೆಂಘೀ ಕೇಸ್ ಸಕ್ರಿಯವಾಗಿದ್ದು, ಡೆಂಘೀ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ನಿನ್ನೆ ಡೆಂಘೀ ಜ್ವರದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 9962ಕ್ಕೆ ಏರಿಕೆಯಾಗಿದ್ದು, ಈ ಮೂಲಕ 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ ತಲುಪಿದೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 3487 ಡೆಂಘೀ ಕೇಸ್​ ಪತ್ತೆಯಾಗಿದೆ.

ಡೆಂಘೀ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೊರೋನಾ ಮಾದರಿಯಲ್ಲಿಯೇ ಡೆಂಘೀ ತಡೆಗೆ ಸರ್ಕಾರ ಕ್ರಮ ಕೈಗೊಂಡಿದೆ. ವಿಶೇಷ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಒಂದೇ ಕಡೆ ಎರಡು ಮೂರು ಕೇಸ್​ಗಳು ಪತ್ತೆಯಾದರೆ ಹಾಟ್ ಸ್ಪಾಟ್ ಎಂದು ಗುರುತಿಸಲಾಗುತ್ತಿದೆ.. ಸದ್ಯ ಡೇಂಘಿ ಪೀಡಿತರಲ್ಲಿ 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಡೆಯುತ್ತಿದ್ದಾರೆ.

ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣದಲ್ಲಿ ಮತ್ತೊಂದು ಬೇಟೆ – 10 ಕೋಟಿ ಗುಳುಂ ಮಾಡಿದ್ದ ಶ್ರೀನಿವಾಸ್​ ರಾವ್​ ಅರೆಸ್ಟ್..!

 

 

 

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here