ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಯಲ್ಲಿ 320 ಮಂದಿಗೆ ಡೆಂಘೀ ದೃಢಪಟ್ಟಿದ್ದು, ಒಟ್ಟು ಡೆಂಘೀ ಪ್ರಕರಣ 17 ಸಾವಿರ ಗಡಿ ದಾಟಿದೆ.
ಡೆಂಘೀ ಕೇಸ್ 17 ಸಾವಿರದ ಗಡಿ ದಾಟಿದ್ದು ಆತಂಕಕ್ಕೆ ಕಾರಣವಾಗಿದೆ. 3004 ಡೆಂಘೀ ಪ್ರಕರಣಗಳ ಆ್ಯಕ್ಟೀವ್ ಆಗಿದ್ದು, 2539 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 456 ಮಂದಿಗೆ ಸಾಮಾನ್ಯ ವಾರ್ಡ್ನಲ್ಲಿ ಟ್ರೀಟ್ಮೆಂಟ್ ನೀಡಲಾಗ್ತಿದೆ. ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ ಡೆಂಘೀ ಹಾವಳಿಗೆ 10 ಮಂದಿ ಬಲಿಯಾಗಿದ್ದಾರೆ. ಒಂದು ವರ್ಷದೊಳಗಿನ 315 ಮಕ್ಕಳಲ್ಲಿ ಡೆಂಘೀ ದೃಢಪಟ್ಟಿದೆ. BBMP ವ್ಯಾಪ್ತಿಯಲ್ಲಿ ಡೆಂಘೀ ಕೇಸ್ 7 ಸಾವಿರದ ಗಡಿದಾಟಿವೆ. ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 135 ಪ್ರಕರಣಗಳು ದೃಢಪಟ್ಟಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀಗೆ ಇಲ್ಲಿಯವರೆಗೆ ಮೂರು ಮಂದಿ ಬಲಿಯಾಗಿದ್ದಾರೆ.
ಇದನ್ನೂ ಓದಿ : ಬೆಂಗಳೂರು TO ಮೈಸೂರು ಪಾದಯಾತ್ರೆಗೆ ಸ್ವಪಕ್ಷದಲ್ಲೇ ಅಪಸ್ವರ – ಪರ್ಯಾಯ ಪಾದಯಾತ್ರೆಗೆ ಸಜ್ಜಾದ ಯತ್ನಾಳ್, ಜಾರಕಿಹೊಳಿ..!