Download Our App

Follow us

Home » ರಾಜ್ಯ » ರಾಜ್ಯದಲ್ಲಿ 17 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ..!

ರಾಜ್ಯದಲ್ಲಿ 17 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ..!

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕಳೆದ 24 ಗಂಟೆಯಲ್ಲಿ 320 ಮಂದಿಗೆ ಡೆಂಘೀ ದೃಢಪಟ್ಟಿದ್ದು, ಒಟ್ಟು ಡೆಂಘೀ ಪ್ರಕರಣ 17 ಸಾವಿರ ಗಡಿ ದಾಟಿದೆ.

ಡೆಂಘೀ ಕೇಸ್​ 17 ಸಾವಿರದ ಗಡಿ ದಾಟಿದ್ದು ಆತಂಕಕ್ಕೆ ಕಾರಣವಾಗಿದೆ. 3004 ಡೆಂಘೀ ಪ್ರಕರಣಗಳ ಆ್ಯಕ್ಟೀವ್​ ಆಗಿದ್ದು, 2539 ಮಂದಿಗೆ ಮನೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 456 ಮಂದಿಗೆ ಸಾಮಾನ್ಯ ವಾರ್ಡ್​ನಲ್ಲಿ ಟ್ರೀಟ್ಮೆಂಟ್​ ನೀಡಲಾಗ್ತಿದೆ. ಇದರಲ್ಲಿ 9 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಡೆಂಘೀ ಹಾವಳಿಗೆ 10 ಮಂದಿ ಬಲಿಯಾಗಿದ್ದಾರೆ. ಒಂದು ವರ್ಷದೊಳಗಿನ 315 ಮಕ್ಕಳಲ್ಲಿ ಡೆಂಘೀ ದೃಢಪಟ್ಟಿದೆ. BBMP ವ್ಯಾಪ್ತಿಯಲ್ಲಿ ಡೆಂಘೀ ಕೇಸ್​ 7 ಸಾವಿರದ ಗಡಿದಾಟಿವೆ. ಕಳೆದ 24 ಗಂಟೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 135 ಪ್ರಕರಣಗಳು ದೃಢಪಟ್ಟಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀಗೆ ಇಲ್ಲಿಯವರೆಗೆ ಮೂರು ಮಂದಿ ಬಲಿಯಾಗಿದ್ದಾರೆ.

ಇದನ್ನೂ ಓದಿ : ಬೆಂಗಳೂರು TO ಮೈಸೂರು ಪಾದಯಾತ್ರೆಗೆ ಸ್ವಪಕ್ಷದಲ್ಲೇ ಅಪಸ್ವರ – ಪರ್ಯಾಯ ಪಾದಯಾತ್ರೆಗೆ ಸಜ್ಜಾದ ಯತ್ನಾಳ್​​,​ ಜಾರಕಿಹೊಳಿ..!

Leave a Comment

DG Ad

RELATED LATEST NEWS

Top Headlines

ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​..!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಜೈಲು ಸೇರಿರುವ ನಟ ದರ್ಶನ್​​ ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿ ವಾಪಸ್​​ ಪಡೆದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ

Live Cricket

Add Your Heading Text Here