ಬೆಂಗಳೂರು : ಕಸ ಟೆಂಡರ್ನಲ್ಲಿ ಸಾವಿರಾರು ಕೋಟಿ ಭ್ರಷ್ಟಾಚಾರ ಆರೋಪ ಸಂಬಂಧ ಕೇಂದ್ರ ಸಚಿವ HDK ವಿರುದ್ಧ ಡಿಸಿಎಂ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ. ಭ್ರಷ್ಟಾಚಾರಕ್ಕೆ ಕುಮಾರಸ್ವಾಮಿ ಕುಟುಂಬವೇ ಕುಖ್ಯಾತಿ, ನಮ್ಮ ಫ್ಯಾಮಿಲಿ ಭ್ರಷ್ಟಾಚಾರಕ್ಕೆ ಕುಖ್ಯಾತಿ ಪಡೆದಿಲ್ಲ ಎಂದು ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆಶಿ ಮಾತನಾಡಿ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡೋದು ಬಿಡಲಿ. ಕುಮಾರಸ್ವಾಮಿ ನೇರ ಸವಾಲೆಸೆದ ಡಿ ಕೆ ಶಿವಕುಮಾರ್, MUDA ಸೇರಿ ಎಲ್ಲಾ ವಿಚಾರಗಳ ಚರ್ಚೆಗೆ ನಾವ್ ಸಿದ್ಧ, ವಿಪಕ್ಷಗಳ ಹೋರಾಟ ಎದುರಿಸಲು ನಾವ್ ರೆಡಿ ಇದ್ದೇವೆ. ಕಲಾಪದ ಹೊರಗೇಕೆ ಒಳಗೇ ಚರ್ಚೆ ಮಾಡೋಣ ಬನ್ನಿ, ನಾವು ಶುದ್ಧ ಮಾಡೋ ಕೆಲ್ಸ ಮಾಡ್ತಿದ್ದೇವೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ನಾಪತ್ತೆಯಾಗಿದ್ದ ಬಸನಗೌಡ ದದ್ದಲ್ ವಿಧಾನಸೌಧದಲ್ಲಿ ಪ್ರತ್ಯಕ್ಷ..!
Post Views: 98