‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ನೇಹಾ ಗೌಡ ತಮ್ಮ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನೇಹಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮಗಳ ಫೋಟೋ ಹಂಚಿಕೊಂಡಿದ್ದಾರೆ.
ಬೆಡ್ ಮೇಲೆ ಮಗು ಮಲಗಿದ್ದು, ಒಂದ್ಕಡೆ ಅಮ್ಮ ನೇಹಾ ಹಾಗೂ ಇನ್ನೊಂದು ಕಡೆ ಚಂದನ್ ಮಗುವಿನ ಕೈ ಬೆರಳನ್ನು ಹಿಡಿದ್ದಾರೆ. ನವೆಂಬರ್ 14 ರಂದು, ನಮ್ಮ ಪುಟ್ಟ ಮಗುವಿನ ನೋಟವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ! ನಮ್ಮ ಜೀವನಕ್ಕೆ ಇವಳು ಬಂದಿರುವುದು ವಿಶೇಷ ಭಾವನೆ ನೀಡಿದೆ. ನಾವು ಎಂದೂ ಊಹಿಸಿರದ ರೀತಿಯಲ್ಲಿ ಅವಳು ನಮ್ಮ ಹೃದಯದ ತುಂಬಾ ತುಂಬಿಕೊಂಡಿದ್ದಾಳೆ. ಎಲ್ಲ ಮಕ್ಕಳು ಪ್ರಕಾಶಮಾನವಾಗಿ ಹೊಳೆಯುತ್ತೀರಿ. ಮಕ್ಕಳ ದಿನಾಚರಣೆ ಶುಭಾಶಯ ಎಂದು ನೇಹಾ ಗೌಡ ಶೀರ್ಷಿಕೆ ಹಾಕಿ, ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಕ್ಟೋಬರ್ 29ರಂದು ನೇಹಾ ಗೌಡ, ಚೊಚ್ಚಲ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನೇಹಾ ಹಾಗೂ ಅವರ ಪತಿ ಚಂದನ್ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಕ್ಟೋಬರ್ 29, 2024 ರಂದು ನಮ್ಮ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದೆ. ನಾವು ತುಂಬಾ ಸಂತೋಷವಾಗಿದ್ದೇವೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಕ್ಕೆ ಧನ್ಯವಾದಗಳು. ತಾಯಿ ಮತ್ತು ನಮ್ಮ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ, ಸಂತೋಷದಿಂದ ಇದ್ದಾರೆ ಎಂಬ ಶೀರ್ಷಿಕೆಯನ್ನು ಹಾಕಿದ್ದರು.
ಇದನ್ನೂ ಓದಿ : ಹಾವೇರಿ : ಶಿಗ್ಗಾಂವಿ ಉಪಚುನಾವಣೆ ಬೆನ್ನಲ್ಲೇ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್ಗಳು ಪತ್ತೆ..!