Download Our App

Follow us

Home » ರಾಜಕೀಯ » ಹಾವೇರಿ : ಶಿಗ್ಗಾಂವಿ ಉಪಚುನಾವಣೆ ಬೆನ್ನಲ್ಲೇ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್​​ಗಳು ಪತ್ತೆ..!

ಹಾವೇರಿ : ಶಿಗ್ಗಾಂವಿ ಉಪಚುನಾವಣೆ ಬೆನ್ನಲ್ಲೇ ಕಾಲುವೆಯಲ್ಲಿ 10 ಬ್ಯಾಲೆಟ್ ಬಾಕ್ಸ್​​ಗಳು ಪತ್ತೆ..!

ಹಾವೇರಿ : ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಮುಗಿದ ಬೆನ್ನಲ್ಲೇ ಹಾವೇರಿಯ ಯತ್ತಿ‌ನಹಳ್ಳಿ ಗ್ರಾಮದ ಬಳಿಯ ಲೇಔಟ್ ಒಂದರಲ್ಲಿ 10 ಬ್ಯಾಲೆಟ್ ಬಾಕ್ಸ್ ಪತ್ತೆಯಾಗಿದೆ. ನಿನ್ನೆಯಷ್ಟೇ ಶಿಗ್ಗಾಂವಿ ಉಪಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್​ಗಳು ಪತ್ತೆಯಾಗಿರೋದು ಸ್ಥಳೀಯರಲ್ಲಿ ಗೊಂದಲಕ್ಕೆ ಕಾರಣವಾಗಿತ್ತು.

ನಿರುಪಯುಕ್ತ ಬ್ಯಾಲೆಟ್ ಬಾಕ್ಸ್​ಗಳನ್ನು ಎಪಿಎಂಸಿ ಗೋದಾಮಿನಲ್ಲಿ ಇರಿಸಲಾಗಿತ್ತು. ಕಿಡಿಗೇಡಿಗಳು ಬಾಕ್ಸ್ ಗಳನ್ನು ಮಾರುವ ಉದ್ದೇಶದಿಂದ ಕಳ್ಳತನ ಮಾಡಿದ್ದ ಶಂಕೆ ಇದೆ. 10 ಬಾಕ್ಸ್ ಸಾಗಿಸಲಾಗದೇ ಲೇಔಟ್​ನ ಕಾಲುವೆಯಲ್ಲಿ ಬಾಕ್ಸ್ ಇಟ್ಟು ಹೋಗಿದ್ದರು. ಗೋದಾಮಿಗೆ ಪೊಲೀಸರು, ಹಾವೇರಿ ತಹಶೀಲ್ದಾರ್ ಶರಣಮ್ಮ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.

ಪೊಲೀಸರೂ ದೂರು ಪಡೆದು ತನಿಖೆ ಮಾಡಿದ್ದರು. ಶಿಗ್ಗಾಂವಿ ಉಪಚುನಾವಣೆಗೂ ಈ ಬಾಕ್ಸ್​ಗಳಿಗೂ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲೆಕ್ಷನ್​ಗೆ EVM ಬಳಸಲಾಗಿದೆ. ಇವು ಹಳೆಯ ಬ್ಯಾಲೆಟ್​ ಬಾಕ್ಸ್ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ನಿಮ್ಮದೇ ಸರ್ಕಾರ, ತನಿಖಾ ಸಂಸ್ಥೆಗಳಿವೆ.. 50 ಕೋಟಿ ಆಮಿಷದ ಮೂಲ ತಿಳಿಸಿ – ಸಿಎಂಗೆ ವಿಜಯೇಂದ್ರ ಟಾಂಗ್..!

Leave a Comment

DG Ad

RELATED LATEST NEWS

Top Headlines

ದೊಡ್ಮನೆಯೊಳಗೆ ಬಂದು ಅಡುಗೆ ಮಾಡಿಟ್ಟು ಸ್ಫರ್ಧಿಗಳಿಗೆ ಸರ್​ಪ್ರೈಸ್ ಕೊಟ್ಟ ಕಿಚ್ಚ ಸುದೀಪ್..!

ಕಿಚ್ಚ ಸುದೀಪ್ ಅವರು ಬಿಗ್ ಬಾಸ್​​ನ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡ್ತಾರೆ ಎಂದರೆ ಟಿಆರ್​ಪಿ ಬರೋದು ಪಕ್ಕಾ. ಈ ಮೊದಲು ಸುದೀಪ್

Live Cricket

Add Your Heading Text Here