ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಬೆನ್ನು ನೋವಿಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ದರ್ಶನ್‌ಗೆ ಸರ್ಜರಿ ಡೇಟ್ ಫಿಕ್ಸ್ ಆಗಿದೆ.
ನವೆಂಬರ್ 13ರಂದು ದರ್ಶನ್ ಬೆನ್ನಿಗೆ ಸರ್ಜರಿ ನಡೆಯಲಿದ್ದು, ಎಲ್ಲಾ ರಿಪೋರ್ಟ್ ಪಡೆದು ವೈದ್ಯರು ಸರ್ಜರಿಗೆ ರೆಡಿಯಾಗಿದ್ದಾರೆ. ಬೆಂಗಳೂರಿನ BGS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ದರ್ಶನ್ ಮುಂಬೈನ ಲೀಲಾವತಿ ಆಸ್ಪತ್ರೆಯ ಸರ್ಜನ್ರಿಂದ ಸಲಹೆ ಪಡೆಯುತ್ತಿದ್ದಾರೆ. ಸರ್ಜರಿಯಂದು ಲೀಲಾವತಿ ಆಸ್ಪತ್ರೆಯ ಟಾಪ್ ಸರ್ಜನ್ ಬರೋ ಸಾಧ್ಯತೆಯಿದ್ದು, ಈಗಾಗಲೇ ಹಲವು ಬಾರಿ ವಿಡಿಯೋ ಕಾನ್ಫರೆನ್ಸಿಂಗ್ನಲ್ಲಿ ಡಿಸ್ಕಷನ್ ಮಾಡಿದ್ದಾರೆ.
ಲೀಲಾವತಿ ಆಸ್ಪತ್ರೆ ನರರೋಗ ಚಿಕಿತ್ಸೆಗೆ ದೇಶದಲ್ಲೇ ಪ್ರಖ್ಯಾತವಾಗಿದ್ದು, BGS ಆಸ್ಪತ್ರೆಯ ತಜ್ಞರು ಮತ್ತು ಲೀಲಾವತಿ ತಜ್ಞರು ದರ್ಶನ್ ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಲೀಲಾವತಿ ತಜ್ಞರ ಸಲಹೆಯಂತೆ ದರ್ಶನ್‌ಗೆ ನಾರ್ಮಲ್ ಸರ್ಜರಿ ಬದಲು ಕೀ ಹೋಲ್ ಸರ್ಜರಿ ನಡೆಯಲಿದೆ. ಸರ್ಜರಿ ಆದರೆ 6 ತಿಂಗಳು ದರ್ಶನ್ ನಡೆಯೋಕ್ಕಾಗಲ್ಲ, ಮನೇಲಿ ಫುಲ್ ಬೆಡ್ರೆಸ್ಟ್ನಲ್ಲೇ ಇರಬೇಕಾಗುತ್ತೆ.
ಹೀಗಾಗಿ, ನವೆಂಬರ್ 13ರಂದೇ ಸರ್ಜರಿಗೆ ಡೇಟ್ ಫಿಕ್ಸ್ ಮಾಡಲಾಗಿದೆ.
ಇದನ್ನೂ ಓದಿ : ನಾನು ಮಾಡ್ದೇ ಇರೋ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡ್ತಿದ್ದೇನೆ – ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು..!