Download Our App

Follow us

Home » ಸಿನಿಮಾ » ದರ್ಶನ್​ಗೆ ಸರ್ಜರಿ ಡೇಟ್ ಫಿಕ್ಸ್ – ತಜ್ಞರ ಸಲಹೆಯಂತೆ ದಾಸನಿಗೆ ಕೀ ಹೋಲ್ ಸರ್ಜರಿ ನಡೆಯೋದು ಯಾವಾಗ?

ದರ್ಶನ್​ಗೆ ಸರ್ಜರಿ ಡೇಟ್ ಫಿಕ್ಸ್ – ತಜ್ಞರ ಸಲಹೆಯಂತೆ ದಾಸನಿಗೆ ಕೀ ಹೋಲ್ ಸರ್ಜರಿ ನಡೆಯೋದು ಯಾವಾಗ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ಜೈಲು ಸೇರಿದ್ದ ದರ್ಶನ್‌ಗೆ ಚಿಕಿತ್ಸೆಗಾಗಿ 6 ವಾರಗಳ ಕಾಲ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಬೆನ್ನು ನೋವಿಗಾಗಿ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ದರ್ಶನ್​ಗೆ ಸರ್ಜರಿ ಡೇಟ್ ಫಿಕ್ಸ್ ಆಗಿದೆ.

ನವೆಂಬರ್ 13ರಂದು ದರ್ಶನ್​ ಬೆನ್ನಿಗೆ ಸರ್ಜರಿ ನಡೆಯಲಿದ್ದು, ಎಲ್ಲಾ ರಿಪೋರ್ಟ್ ಪಡೆದು ವೈದ್ಯರು ಸರ್ಜರಿಗೆ ರೆಡಿಯಾಗಿದ್ದಾರೆ. ಬೆಂಗಳೂರಿನ BGS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ದರ್ಶನ್ ಮುಂಬೈನ ಲೀಲಾವತಿ ಆಸ್ಪತ್ರೆಯ ಸರ್ಜನ್​ರಿಂದ ಸಲಹೆ ಪಡೆಯುತ್ತಿದ್ದಾರೆ. ಸರ್ಜರಿಯಂದು ಲೀಲಾವತಿ ಆಸ್ಪತ್ರೆಯ ಟಾಪ್ ಸರ್ಜನ್ ಬರೋ ಸಾಧ್ಯತೆಯಿದ್ದು, ಈಗಾಗಲೇ ಹಲವು ಬಾರಿ ವಿಡಿಯೋ ಕಾನ್ಫರೆನ್ಸಿಂಗ್​ನಲ್ಲಿ ಡಿಸ್ಕಷನ್ ಮಾಡಿದ್ದಾರೆ.

ಲೀಲಾವತಿ ಆಸ್ಪತ್ರೆ ನರರೋಗ ಚಿಕಿತ್ಸೆಗೆ ದೇಶದಲ್ಲೇ ಪ್ರಖ್ಯಾತವಾಗಿದ್ದು, BGS ಆಸ್ಪತ್ರೆಯ ತಜ್ಞರು ಮತ್ತು ಲೀಲಾವತಿ ತಜ್ಞರು ದರ್ಶನ್ ಚಿಕಿತ್ಸೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಲೀಲಾವತಿ ತಜ್ಞರ ಸಲಹೆಯಂತೆ ದರ್ಶನ್​ಗೆ ನಾರ್ಮಲ್ ಸರ್ಜರಿ ಬದಲು ಕೀ ಹೋಲ್ ಸರ್ಜರಿ ನಡೆಯಲಿದೆ. ಸರ್ಜರಿ ಆದರೆ 6 ತಿಂಗಳು ದರ್ಶನ್​ ನಡೆಯೋಕ್ಕಾಗಲ್ಲ, ಮನೇಲಿ ಫುಲ್ ಬೆಡ್​ರೆಸ್ಟ್​ನಲ್ಲೇ ಇರಬೇಕಾಗುತ್ತೆ.
ಹೀಗಾಗಿ, ನವೆಂಬರ್ 13ರಂದೇ ಸರ್ಜರಿಗೆ ಡೇಟ್ ಫಿಕ್ಸ್ ಮಾಡಲಾಗಿದೆ.

ಇದನ್ನೂ ಓದಿ : ನಾನು ಮಾಡ್ದೇ ಇರೋ ತಪ್ಪಿಗೆ ಭಿಕ್ಷುಕಿಯಂತೆ ತಿರುಗಾಡ್ತಿದ್ದೇನೆ – ಭಾರತದಿಂದ ಓಡಿ ಹೋದ ರಾಖಿ ಸಾವಂತ್ ಕಣ್ಣೀರು..!

Leave a Comment

DG Ad

RELATED LATEST NEWS

Top Headlines

ನಟ ದರ್ಶನ್​ಗೆ ನಾಳೆ ನಿರ್ಣಾಯಕ ದಿನ – ಏನಾಗಲಿದೆ ಬೇಲ್ ಭವಿಷ್ಯ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್​​ಗೆ ನಾಳೆ ನಿರ್ಣಾಯಕ ದಿನವಾಗಿದೆ. ಮಧ್ಯಂತರ ಜಾಮೀನು ಪಡೆದು ಜೈಲಿಂದ ಹೊರಗೆ ಬಂದಿರುವ ನಟ ದರ್ಶನ್ ಸದ್ಯ

Live Cricket

Add Your Heading Text Here