ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಬಂಧಿಯಾಗಿದ್ದಾರೆ. ಇಂದಿಗೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 50 ದಿನಗಳು ಕಳೆದಿವೆ.
ತನ್ನ ಗೆಳತಿ ಪವಿತ್ರಾಗೌಡಳಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ದರ್ಶನ್ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ದರ್ಶನ್ ಸೇರಿ ಆತನ ಸಹಚರರು ಜೈಲು ಪಾಲಾಗಿದ್ದಾರೆ. 2011ರಲ್ಲಿ ಒಂದು ಕೇಸ್ನಲ್ಲಿ ಬಂಧನದಲ್ಲಿದ್ದ ದರ್ಶನ್ 18 ದಿನಕ್ಕೇ ಜೈಲಿನಿಂದ ಹೊರಬಂದಿದ್ದರು. ಆದರೆ ಈ ಬಾರಿ ಜೂನ್ 22 ರಂದು ಸಂಜೆ ಬಂಧನವಾಗಿದ್ದ ನಟ ದರ್ಶನ್ ಈಗಾಲೂ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ.
ಈಗಾಗಲೇ ಸೆರೆಮನೆಯಲ್ಲಿರುವ ನಟ ದರ್ಶನ್ರನ್ನು ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ನಟ -ನಟಿಯರು ಬಂದು ಭೇಟಿಯಾಗುತ್ತಿದ್ದಾರೆ. ದರ್ಶನ್ ಭೇಟಿ ಲಿಸ್ಟ್ ಆರ್ಟಿಐ ಅರ್ಜಿಯಲ್ಲಿ ಬೆಳಕಿಗೆ ಬಂದಿದೆ. ಜಸ್ಟ್ ಒಂದು ತಿಂಗಳಲ್ಲಿ ಜೈಲಿನಲ್ಲಿ ದರ್ಶನ್ರನ್ನು ಜೂನ್ 25 ರಿಂದ ಜುಲೈ 26ರ ಅವಧಿಯಲ್ಲಿ 30 ಜನ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
- ಜೂನ್ 22ರ ಸಂಜೆ ಪರಪ್ಪನ ಅಗ್ರಹಾರ ಸೇರಿದ್ದ ದರ್ಶನ್-
- ಜೂನ್ 25 ರಂದು ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್-
- ಜುಲೈ 9ಕ್ಕೆ ಮನೆ ಊಟ,ಹಾಸಿಗೆ ಹಾಗೂ ಪುಸ್ತಕಕ್ಕೆ ಹೈಕೋರ್ಟ್ಗೆ ಮೊರೆ-
- ಜುಲೈ 19ಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಅರ್ಜಿ ಸಲ್ಲಿಸಲು ಹೈಕೋರ್ಟ್ ಸೂಚನೆ-
- ಜುಲೈ 25ಕ್ಕೆ ದರ್ಶನ್ ಮನೆ ಊಟ ನಿರಾಕರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅದೇಶ
- ಜುಲೈ 30ಕ್ಕೆ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ಗೆ ಹೊಸ ಅರ್ಜಿ-
- 10 ದಿನಗಳಲ್ಲಿ ಮನೆ ಊಟದ ಅರ್ಜಿ ಬಗ್ಗೆ ನಿರ್ಧಾರಕ್ಕೆ ಜೈಲಾಧಿಕಾರಿಗಳಿಗೆ ಸೂಚನೆ-
- ಆಗಸ್ಟ್ 7ರಂದು ದರ್ಶನ್ ಮನೆ ಊಟ ನಿರಾಕರಿಸಿರುವ ಜೈಲು ಅಧಿಕಾರಿಗಳು-
- ಆಗಸ್ಟ್ 20ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ ದರ್ಶನ್ ಮನೆಯೂಟದ ಅರ್ಜಿ
ಇದನ್ನೂ ಓದಿ : KIADB ಅಧಿಕಾರಿಗಳ ಮೇಲೆ ED ರೇಡ್ ಪ್ರಕರಣ – ಮುಖ್ಯ ಲೆಕ್ಕಾಧಿಕಾರಿ ಮನೆಯಲ್ಲಿ 1.2 ಕೋಟಿ ಹಣ ಸೀಜ್..!