ಬೆಂಗಳೂರು : ಬಹುಕೋಟಿ ಅವ್ಯವಹಾರ ವಂಚನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಧಾರವಾಡದಲ್ಲಿರುವ KIADB ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರೀಶಿಲನೆ ನಡಿಸಿದ್ದರು. ಇದೀಗ ಮುಖ್ಯ ಲೆಕ್ಕಾಧಿಕಾರಿ ವಾಣಿ ಮನೆಯಲ್ಲಿ 1.2 ಕೋಟಿ ರೂ. ಹಣ ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಲೆಕ್ಕಾಧಿಕಾರಿ ವಾಣಿ ಮನೆ ಹಾಗೂ ಕಚೇರಿ ಮೇಲೆ ರೇಡ್ ಮಾಡಿದ್ದರು. ಆರ್.ಆರ್.ನಗರದಲ್ಲಿರುವ ಟೆಂಪಲ್ ಬೆಲ್ ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಶೋಧ ಕಾರ್ಯದ ವೇಳೆ ಹಣ 1.2 ಕೋಟಿ ರೂ. ಪತ್ತೆಯಾಗಿದ್ದು, ಈ ಹಣವನ್ನು ಇಡಿ ಅಧಿಕಾರಿಗಗಳು ಸೀಜ್ ಮಾಡಿದ್ದಾರೆ.
ಭೂ ಸ್ವಾಧೀನ ಹೆಸರಲ್ಲಿ ನೂರಾರು ಕೋಟಿ ಹಣವನ್ನು ಅಧಿಕಾರಿಗಳು ಲೂಟಿ ಮಾಡಿರುವ ಆರೋಪ ಕೇಳಿಬಂದಿತ್ತು. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರದ ಹೆಸರಲ್ಲಿ ವಂಚನೆ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ಲೂಟಿ ಮಾಡಿರುವುದು, ಜೊತೆಗೆ IDBI ಬ್ಯಾಂಕ್ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು.
ಅಷ್ಟೇ ಅಲ್ಲದೇ, ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹೆಸರಲ್ಲಿ ಅಕ್ರಮ ಹಾಗೂ ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿ ಲೂಟಿ ಮಾಡಿರುವ ಆರೋಪ ಕೆಐಡಿಬಿ ಮೇಲಿದ್ದು, ಈ ಸಂಬಂಧ ಧಾರವಾಡ ಕೆಐಎಡಿಬಿ ಭೂ ಸ್ವಾಧೀನ ಕಚೇರಿ ಹಾಗೂ ಬೆಂಗಳೂರು ಮುಖ್ಯ ಕಚೇರಿಯಲ್ಲಿ ಇಡಿ ಅಧಿಕಾರಿಗಳು ರೇಡ್ ಮಾಡಿದ್ದರು. ಈ ವೇಳೆ ಇಡಿ ಅಧಿಕಾರಿಗಳು ಅಪಾರ ಪ್ರಮಾಣದ ದಾಖಲೆ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಅದ್ದೂರಿಯಾಗಿ ಸೆಟ್ಟೇರಿತು ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಷನ್ನ ಹೊಸ ಸಿನಿಮಾ..!