Download Our App

Follow us

Home » ಅಪರಾಧ » ಸಂಜೆ ವೇಳೆಗೆ ನಟ ದರ್ಶನ್​​ ರಿಲೀಸ್ ​- ಇಮೇಲ್​ ಮೂಲಕ ಬಳ್ಳಾರಿ ಜೈಲ್​ ತಲುಪಿದ ಆದೇಶ ಪ್ರತಿ..!

ಸಂಜೆ ವೇಳೆಗೆ ನಟ ದರ್ಶನ್​​ ರಿಲೀಸ್ ​- ಇಮೇಲ್​ ಮೂಲಕ ಬಳ್ಳಾರಿ ಜೈಲ್​ ತಲುಪಿದ ಆದೇಶ ಪ್ರತಿ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್​​ಗೆ ಬಿಗ್ ರಿಲೀಫ್ ಸಿಕ್ಕಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ದರ್ಶನ್​​ನ್ನು ಸಂಜೆ ವೇಳೆಗೆ​​ ರಿಲೀಸ್​ ಮಾಡಲು ಇಮೇಲ್​ ಮೂಲಕ ಕೋರ್ಟ್ ಆದೇಶ ಪ್ರತಿ ರವಾನೆ ಮಾಡಿದೆ.

ಬಳ್ಳಾರಿ ಸೆಂಟ್ರಲ್​​ ಜೈಲ್​ಗೆ ವಿಚಾರಣಾ ಕೋರ್ಟ್​ನಿಂದ ರಿಲೀಸ್ ಆರ್ಡರ್​ ರವಾನೆ ಮಾಡಿದ್ದು, ನ್ಯಾಯಾಧೀಶರಾದ ಜೈಶಂಕರ್​​ರಿಂ ರಿಲೀಸ್ ಆರ್ಡರ್​​​ ಕಳುಹಿಸಿದ್ದಾರೆ. ಪಾಸ್​ಪೋರ್ಟ್​ ಸರೆಂಡರ್​​, ಇಬ್ಬರ ಶ್ಯೂರಿಟಿ ನೀಡಿ ದರ್ಶನ್​​ ಕುಟುಂಬದ ಸದಸ್ಯರು ಕೋರ್ಟ್​ ಷರತ್ತು ಪೂರೈಸಿದ್ದಾರೆ. ಹೀಗಾಗಿ ಮೇಲ್​​ ಮೂಲಕ ರಿಲೀಸ್ ಆರ್ಡರ್​ ರವಾನೆ ಮಾಡಲಾಗಿದೆ.

ಆದೇಶ ಪ್ರತಿ ಬಳ್ಳಾರಿ ಜೈಲ್​​ ಅಧಿಕಾರಿ ಕೈಗೆ ಸಿಗ್ತಿದ್ದಂತೆ ದರ್ಶನ್​ನ್ನು ಬಿಡುಗಡೆ ಮಾಡಲಿದ್ದಾರೆ. ದರ್ಶನ್​ ಆಪ್ತರಾಗಿರುವ ನಟ ಧನ್ವೀರ್ ಹಾಗೂ ಸಹೋದರ ದಿನಕರ್​ ತೂಗದೀಪ್​​​ ಶ್ಯೂರಿಟಿ ಕೊಟ್ಟಿದ್ದಾರೆ. ದಿನಕರ್ ಅವರು ಮಾಗಡಿ ರಸ್ತೆ, ರಾಜಾಜಿನಗರ ಆಸ್ತಿ ಶ್ಯೂರಿಟಿ ಕೊಟ್ಟಿದ್ದಾರೆ. ದರ್ಶನ್​ ಬೇಲ್​ಗಾಗಿ 2 ಲಕ್ಷದ ಬಾಂಡ್ ಶ್ಯೂರಿಟಿ ನೀಡಿದ್ದಾರೆ. ನವೆಂಬರ್​​ 20ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಸಂಜೆ ವೇಳೆಗೆ ದರ್ಶನ್​​ ರಿಲೀಸ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ದರ್ಶನ್​ ಇವತ್ತೇ ರಿಲೀಸ್ ಆಗ್ತಾರಾ? – ಹಲವು ವಿಷಯ ಬಿಚ್ಚಿಟ್ಟ ದರ್ಶನ್ ಪರ ವಕೀಲ..!

Leave a Comment

DG Ad

RELATED LATEST NEWS

Top Headlines

ಹಾಕಿ ಕ್ರೀಡಾಕೂಟದಲ್ಲಿ ಪರ್ಜನ್ಯ ಮತ್ತು ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ..!

ಮೈಸೂರು : ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಹತ್ತನೇ ತರಗತಿ ವಿದ್ಯಾರ್ಥಿ R. ಪರ್ಜನ್ಯ ಮತ್ತು ತಂಡ ಹಾಕಿ ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪರ್ಜನ್ಯ ಹಾಗೂ ತಂಡ

Live Cricket

Add Your Heading Text Here