Download Our App

Follow us

Home » ಜಿಲ್ಲೆ » 2025ರಲ್ಲಿ ದರ್ಶನ್​​ ರಾಜಕೀಯಕ್ಕೆ ಎಂಟ್ರಿ – ಸ್ಫೋಟಕ ಭವಿಷ್ಯ ನುಡಿದ ಅವಧೂತ ಅರ್ಜುನ್ ಗುರೂಜಿ..!

2025ರಲ್ಲಿ ದರ್ಶನ್​​ ರಾಜಕೀಯಕ್ಕೆ ಎಂಟ್ರಿ – ಸ್ಫೋಟಕ ಭವಿಷ್ಯ ನುಡಿದ ಅವಧೂತ ಅರ್ಜುನ್ ಗುರೂಜಿ..!

ಮೈಸೂರು : ನಟ ದರ್ಶನ್ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆ ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ ಅವರ ಭವಿಷ್ಯದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಕೆಲ ದಿನಗಳ ಹಿಂದೆ ನಟ ದರ್ಶನ್​ಗೆ ಅಕ್ಟೋಬರ್ 20ರ ನಂತರ ಬೇಲ್ ಸಿಗುತ್ತದೆ ಎಂದು ಅವಧೂತ ಅರ್ಜುನ್ ಗುರೂಜಿ ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಈಗ ನಟ ದರ್ಶನ್​ಗೆ ಜಾಮೀನು ಸಿಕ್ಕಿದೆ. ಈ ಬೆನ್ನಲ್ಲೇ ಅರ್ಜುನ್ ಗುರೂಜಿ ಸುದ್ದಿಗೋಷ್ಠಿ ನಡೆಸಿ ದರ್ಶನ್​​ ರಾಜಕೀಯ ಎಂಟ್ರಿ ಕೊಡುತ್ತಾರೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

2025ರ ನಂತರ ದರ್ಶನ್​ಗೆ ಎಲ್ಲಾ ಒಳ್ಳೇದಾಗುತ್ತದೆ, ಸಿನಿಮಾದಲ್ಲೂ ಒಳ್ಳೇದಾಗುತ್ತೆ, ರಾಜಕೀಯ ಲಕ್ ತಿರುಗುತ್ತೆ. ರಾಜಕೀಯದಿಂದಲೇ ಅವಕಾಶಗಳು ಹುಡುಕಿಕೊಂಡು ಬರುತ್ತೆ, ಕಲ್ಲಿಗೆ ಏಟು ಬಿದ್ದರೇನೆ ವಿಗ್ರಹ ಆಗೋದು. ದರ್ಶನ್​ಗೆ ಈಗ ಉಳಿ ಏಟು ಬಿದ್ದು ವಿಗ್ರಹವಾಗಿದ್ದಾರೆ, ಮುಂದೆ ಅವರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ತಾರೆ. ದರ್ಶನ್​ ಮುಂದೆ ರಾಜಕೀಯಕ್ಕೆ ಬರ್ತಾರೆ, ಒಳ್ಳೆ ಭವಿಷ್ಯವಿದೆ ಎಂದಿದ್ದಾರೆ.

ಸೂಕ್ತ ಕಾಲದಲ್ಲಿ ರಾಜಕೀಯ ಪ್ರವೇಶವನ್ನು ನಿರ್ಧರಿಸ್ತಾರೆ, 2025ರಲ್ಲಿ ಚಿತ್ರರಂಗಕ್ಕೆ ದರ್ಶನ್​ ಕಮ್ ಬ್ಯಾಕ್ ಮಾಡ್ತಾರೆ. ದರ್ಶನ್​ಗೆ ಸ್ತ್ರೀ ದೋಷವಿಲ್ಲ, ಸಮಯ ಕೆಟ್ಟಿದ್ದರಿಂದ ಹೀಗಾಗಿದೆ. ದರ್ಶನ್ ಮಾಡಿರೋ ಸಹಾಯಗಳು ಅವರನ್ನು ಕಾಪಾಡುತ್ತವೆ, ಕನ್ನಡ ಚಿತ್ರರಂಗಕ್ಕೂ ಮುಂದಿನ ದಿನಗಳಲ್ಲಿ ಒಳ್ಳೆಯದಾಗುತ್ತೆ. ಎಲ್ಲರೂ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಆಗುತ್ತೆ ಎಂದು ಅರ್ಜುನ್ ಅವಧೂತರು ದರ್ಶನ್ ಭವಿಷ್ಯವನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಲ್ಲಿ ಅಮಾನವೀಯ ಘಟನೆ.. ಯುವಕ ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ರು ನೆರವಿಗೆ ಬಾರದ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here