Download Our App

Follow us

Home » ಸಿನಿಮಾ » ‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಮರ್ಡರ್‌ ಕೇಸ್‌ ಎಪಿಸೋಡ್‌? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಮರ್ಡರ್‌ ಕೇಸ್‌ ಎಪಿಸೋಡ್‌? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಕುರಿತು ಭರ್ಜರಿ ಚರ್ಚೆಗಳು ನಡೆಯುತ್ತಿವೆ. ಅನೇಕರು ನಾನಾ ರೀತಿಯ ಮೀಮ್​ಗಳನ್ನು ಮಾಡಿ ಟ್ರೋಲ್ ಮಾಡ್ತಿದ್ರೆ, ಕೆಲವರು ಸಿನಿಮಾ ಮಾಡೋಕೆ ಟೈಟಲ್ ರಿಜಿಸ್ಟರ್ ಮಾಡಲು ಮುಂದಾಗಿದ್ದರು. ಈ ಮಧ್ಯೆ ಕಲರ್ಸ್​ ಕನ್ನಡ ಪ್ರಸಾರ ಮಾಡುತ್ತಿರುವ ಶಾಂತಂ ಪಾಪಂ’ ಕ್ರೈಂ ಕಥಾನಕದ ಎಪಿಸೋಡ್​​​ವೊಂದರಲ್ಲಿ ನಟ ದರ್ಶನ್​​​​​ ಜೈಲು ಸೇರಿಸಿದ ಮರ್ಡರ್​​ ಕೇಸ್​​​ನ ಪ್ರಕರಣವನ್ನೇ ​ಹೋಲುವ ಕಥೆಯೊಂದು ಪ್ರಸಾರವಾಗುತ್ತಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಶಾಂತಂ ಪಾಪಂ’ ಕ್ರೈಂ ಕಥಾನಕದ ಶೋ ಜನಪ್ರಿಯವಾಗಿದೆ. ಇತ್ತೀಚೆಗೆ ಪ್ರಸಾರವಾದ ಡೇಡ್ ಡೆವಿಲ್ ದೇವದಾಸ್‌ ಎಪಿಸೋಡ್‌ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನೇ ಹೋಲುವಂತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದ್ದು, ಇದೇ ವಿಚಾರವನ್ನು ಸಾಕಷ್ಟು ಜನ ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ.

ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳ ನೈಜ ಘಟನೆಗಳನ್ನು ಆಧರಿಸಿ ‘ಶಾಂತಂ ಪಾಪಂ’ ಧಾರಾವಾಹಿ ಕಥೆಯಂತೆ ಸಿರೀಸ್ ರೂಪದಲ್ಲಿ ಮೂಡಿ ಬರುತ್ತಿದೆ. ಒಂದು ಅಥವಾ ಎಪಿಸೋಡ್‌ಗಳಲ್ಲಿ ಒಂದೊಂದು ಅಪರಾಧ ಕೃತ್ಯವನ್ನು ಬಿಚ್ಚಿಡಲಾಗುತ್ತಿದೆ. ಆ ಮೂಲಕ ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ? ದುಷ್ಟರು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಾರೆ? ನೇಮು ಫೇಮಿಗಾಗಿ ಏನೆಲ್ಲಾ ಅಪರಾಧಗಳನ್ನು ಮಾಡುತ್ತಾರೆ? ಅದನ್ನು ಮುಚ್ಚಿಡಲು ಹೇಗೆಲ್ಲಾ ಪ್ರಯತ್ನಿಸುತ್ತಾರೆ ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗುತ್ತಿದೆ.

ಸದ್ಯ ರೇಣುಕಾಸ್ವಾಮಿ ಪ್ರಕರಣವನ್ನು ಹೋಲುವ ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದಾಸ್ ಒಬ್ಬ ಶ್ರೀಮಂತ. ಆದರೆ ಕೊಲೆ ಆರೋಪದಲ್ಲಿ ಪೊಲೀಸರು ಯಾರಿಗೂ ಕ್ಯಾರೇ ಎನ್ನದೇ  ದಾಸ್​ನನ್ನು ಬಂಧಿಸುತ್ತಾರೆ. ಅದಾಗಲೇ ಮದುವೆ ಆಗಿದ್ದರೂ ಖ್ಯಾತ ಉದ್ಯಮಿ ದಾಸ್ ಒಬ್ಬ ನಟಿಯ ಮೋಹ ಪಾಶಕ್ಕೆ ಸಿಲುಕ್ತಾನೆ.

ಆ ನಟಿಗೆ ಒಬ್ಬ ಅನಾಮಿಕನಿಂದ ಕೆಟ್ಟ ಕೆಟ್ಟ ಮೆಸೇಜ್‌ಗಳು ಬರಲು ಆರಂಭಿಸುತ್ತೆ. ಅದನ್ನು ಆಕೆ ದಾಸ್ ಮುಂದಿಡುತ್ತಾಳೆ. ಅದನ್ನು ಕೇಳಿ ಉದ್ಯಮಿ ರಾಕ್ಷಸನಾಗ್ತಾನೆ. ದಾಸ್ ತಮ್ಮ ಆಪ್ತರಿಗೆ ಹೇಳಿ ಕೆಟ್ಟದಾಗಿ ಮೆಸೇಜ್ ಮಾಡಿದ ಕಿಡಿಗೇಡಿಯನ್ನು ಅಪಹರಿಸಿ ಕರೆತರುವಂತೆ ಹೇಳುವುದು, ಆತನನ್ನು ಕರೆತಂದು ಒಂದು ಶೆಡ್‌ ಮುಂದೆ ಥಳಿಸುವುದನ್ನು ಪ್ರೋಮೊದಲ್ಲಿ ನೋಡಬಹುದು. ಇದನ್ನೆಲ್ಲಾ ನೋಡಿದವರು ಇದು ರೇಣುಕಾಸ್ವಾಮಿ ಕಥೆನೇ? ಎಂದು ಊಹಿಸಿಕೊಳ್ಳುತ್ತಿದ್ದಾರೆ.

ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದರ್ಶನ್​​ ಹೋಲುವ ದಾಸ್ ಪಾತ್ರ, ಪವಿತ್ರಾಗೌಡ-ಪ್ರೇರಣಾ, ವಿಜಯಲಕ್ಷ್ಮಿ-ವಿನಯ, ರೇಣುಕಾಸ್ವಾಮಿಗೆ ವಿರೂಪಾಕ್ಷ ಅಂತಾ ಪಾತ್ರದ ಹೆಸರು ಕೊಟ್ಟಿದೆ. ಇನ್ನು ಸೋಷಿಯಲ್​ ಮೀಡಿಯಾದಲ್ಲಿ ಈ ಎಪಿಸೋಡ್​  ಸಖತ್​ ವೈರಲ್​​​ ಹಾಗೂ ಭಾರೀ ಟ್ರೋಲ್​ ಆಗುತ್ತಿದೆ. ರವಿನ್​​ ನಿರ್ದೇಶನ ಮಾಡಿರುವ ಕಲರ್ಸ್​ ಕನ್ನಡದ ಕಥೆಗೆ ಎಲ್ಲೆಲ್ಲೂ ಭಾರೀ  ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಶಾಂತಂ ಪಾಪಂನ ಈ ಎಪಿಸೋಡ್​​ನಿಂದಾಗಿ ಕಲರ್ಸ್​ ಕನ್ನಡದ TRP ಗಗನಕ್ಕೇರುತ್ತಿದೆ.

ಇದನ್ನೂ ಓದಿ : ರಾಜ್ಯ ಪೊಲೀಸ್​ ಇಲಾಖೆಯ ದಕ್ಷ ಹಾಗೂ ಖಡಕ್​ ಅಧಿಕಾರಿ ಡಿಜಿಪಿ ಕಮಲ್ ಪಂತ್ ಸೇವೆಯಿಂದ ನಿವೃತ್ತಿ..!

Leave a Comment

DG Ad

RELATED LATEST NEWS

Top Headlines

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್​​ಗೆ ಡಿಕ್ಕಿ ಹೊಡೆದ ಕಾರು – ತಾಯಿ, ಮಗ ಸ್ಥಳದಲ್ಲೇ ಸಾವು..!

ಮಂಡ್ಯ : ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ ವೇ ನಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತಾಯಿ ಮಗ ಬಲಿಯಾಗಿರುವ ಘಟನೆ ನಡೆದಿದೆ. ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಾರಿನಲ್ಲಿ

Live Cricket

Add Your Heading Text Here